ಏಡನ್ ಕೊಲ್ಲಿಯಲ್ಲಿ ಕಂಟೈನರ್ ಹಡಗಿನ ಮೇಲೆ ಹೌದಿಗಳ ದಾಳಿ

Update: 2024-07-20 16:40 GMT

ಸಾಂದರ್ಭಿಕ ಚಿತ್ರ Photo : NDTV

ಸನಾ : ಶುಕ್ರವಾರ ಯೆಮನ್ನಿ ಆಗ್ನೇಯದಲ್ಲಿ ಏಡನ್ ಕೊಲ್ಲಿಯ ಮೂಲಕ ಸಾಗುತ್ತಿದ್ದ ಸಿಂಗಾಪುರ ಧ್ವಜವನ್ನು ಹೊಂದಿದ್ದ ಕಂಟೈನರ್ ಹಡಗಿನ ಮೇಲೆ ಹೌದಿಗಳು ದಾಳಿ ನಡೆಸಿದ್ದಾರೆ ಎಂದು ಸಿಂಗಾಪುರದ ಕಡಲ ಮತ್ತು ಬಂದರು ಪ್ರಾಧಿಕಾರ (ಎಂಪಿಎ) ಹೇಳಿದೆ.

ಏಡನ್ ಕೊಲ್ಲಿಯ ಮೂಲಕ ಸಾಗುತ್ತಿದ್ದ ಲೊಬಿವಿಯಾ ಹಡಗಿನ ಮೇಲೆ ದಾಳಿ ನಡೆಸಿರುವ ಮಾಹಿತಿ ಲಭಿಸಿದೆ. ದಾಳಿಯ ಬಳಿಕ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಸಿಬ್ಬಂದಿಗಳು ತಕ್ಷಣ ನಿಯಂತ್ರಿಸಿದ್ದಾರೆ. ದಾಳಿಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಮತ್ತು ಕಂಟೈನರ್ ಹಡಗು ತನ್ನ ಗುರಿಯಾದ ಸೊಮಾಲಿಯಾದ ಬರ್ಬೆರಾ ಬಂದರನ್ನು ತಲುಪಿದೆ. ಅಗತ್ಯಬಿದ್ದರೆ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ಎಂಪಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲೊಬಿವಿಯಾ ಹಡಗಿನತ್ತ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದನ್ನು ಹೌದಿ ಮಿಲಿಟರಿ ವಕ್ತಾರ ಯಾಹ್ಯಾ ಸರೆಯಾ ದೃಢಪಡಿಸಿದ್ದಾರೆ. ಲೊಬಿವಿಯಾ ಹಡಗಿನ ಮೇಲೆ ಎರಡು ಕ್ಷಿಪಣಿ ದಾಳಿ ನಡೆದಿರುವುದಾಗಿ ಬ್ರಿಟನ್ನೆ ಕಡಲ ವ್ಯಾಪಾರ ಕಾರ್ಯಾಚರಣೆ ಏಜೆನ್ಸಿ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News