ಹೌದಿಗಳಿಂದ 113 ಖೈದಿಗಳ ಬಿಡುಗಡೆ

Update: 2024-05-27 16:16 GMT

ಸಾಂದರ್ಭಿಕ ಚಿತ್ರ

ಸನಾ: ಯೆಮನ್‍ನ ಹೌದಿ ಗುಂಪು ರವಿವಾರ 100ಕ್ಕೂ ಅಧಿಕ ಖೈದಿಗಳನ್ನು ಬಿಡುಗಡೆ ಮಾಡಿದ್ದು ಈ ಕ್ರಮವು ಖೈದಿಗಳಿಗೆ ಕ್ಷಮಾದಾನ ನೀಡಿ ಅವರ ಕುಟುಂಬಗಳಿಗೆ ಮರಳಿಸಲು ಏಕಪಕ್ಷೀಯ ಮಾನವೀಯ ಕ್ರಮ ಎಂದು ಕರೆದಿದೆ.

ಇದರಲ್ಲಿ ಹೆಚ್ಚಿನವು ಅನಾರೋಗ್ಯ, ವೃದ್ಧರು ಮತ್ತು ಗಾಯಗೊಂಡವರು ಸೇರಿದಂತೆ ಮಾನವೀಯ ಪ್ರಕರಣಗಳಾಗಿವೆ. ಬಂಧಿತರು ಸರಕಾರದ ಯೋಧರಾಗಿದ್ದು ಯುದ್ಧಕ್ಷೇತ್ರದಲ್ಲಿ ಸೆರೆಸಿಕ್ಕವರು ಎಂದು ಹೌದಿಗಳು ನಡೆಸುತ್ತಿರುವ ಖೈದಿಗಳ ವ್ಯವಹಾರ ಸಮಿತಿಯ ಮುಖ್ಯಸ್ಥ ಅಬ್ದುಲ್ ಖಾದರ್ ಅಲ್-ಮುರ್ತಾದಾ ಹೇಳಿದ್ದಾರೆ.

“ಬಂಧಿತರು ಯೋಧರಲ್ಲ, ನಾಗರಿಕರು. ಅವರನ್ನು ಮನೆ, ಮಸೀದಿ ಮತ್ತು ಕೆಲಸದ ಸ್ಥಳದಿಂದ ಹೌದಿಗಳು ಅಪಹರಿಸಿದ್ದರು” ಎಂದು ಯೆಮನ್‍ನ ಅಂತರಾಷ್ಟ್ರೀಯ ಮಾನ್ಯತೆಯ ಸರಕಾರ ಸ್ಪಷ್ಟಪಡಿಸಿದೆ. ಈ ಸಂತ್ರಸ್ತರನ್ನು ಯಾವುದೇ ಹೆಸರಿನಡಿ ಬಿಡುಗಡೆಗೊಳಿಸುವುದು ಹೌದಿಗಳನ್ನು ಈ ಅಪರಾಧದಿಂದ ಮುಕ್ತಗೊಳಿಸುವುದಿಲ್ಲ ಎಂದು ಯೆಮನ್ ಸರಕಾರದ ಮಾನವ ಹಕ್ಕುಗಳ ಇಲಾಖೆಯ ಉಪಸಚಿವ ಮಜೀದ್ ಫದೈಲ್ ಎಕ್ಸ್(ಟ್ವೀಟ್) ಮಾಡಿದ್ದಾರೆ.

ಇರಾನ್ ಬೆಂಬಲಿತ ಹೌದಿ ಗುಂಪು 2014ರ ಅಂತ್ಯದಲ್ಲಿ ಯೆಮನ್ ಸರಕಾರವನ್ನು ರಾಜಧಾನಿ ಸನಾದಿಂದ ಹೊರಹಾಕಿದೆ. ಸರಕಾರವನ್ನು ಮರುಸ್ಥಾಪಿಸಲು ಸೌದಿ ಅರೆಬಿಯಾ ನೇತೃತ್ವದ ಮಿಲಿಟರಿ ಒಕ್ಕೂಟ 2015ರಿಂದ ಪ್ರಯತ್ನ ಮುಂದುವರಿಸಿದೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News