ಪಾಕಿಸ್ತಾನದ ಸುಂಕ ಹೊಂದಾಣಿಕೆ ಯೋಜನೆ ತಿರಸ್ಕರಿಸಿದ ಐಎಂಎಫ್
Update: 2023-09-05 16:38 GMT
ಇಸ್ಲಮಾಬಾದ್: ಯಾವುದೇ ಸುಂಕದ ಹೊಂದಾಣಿಕೆ ಅಥವಾ ಹೆಚ್ಚಿವರಿ ಸಬ್ಸಿಡಿ ಒದಗಿಸುವ ಪಾಕಿಸ್ತಾನದ ಪ್ರಸ್ತಾವವನ್ನು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ತಿರಸ್ಕರಿಸಿರುವುದು ಆರ್ಥಿಕ ಸವಾಲುಗಳ ನಿರ್ವಹಣೆಯನ್ನು ಇನ್ನಷ್ಟು ಕಠಿಣಗೊಳಿಸಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
ಆಗಸ್ಟ್ನ ಬಿಲ್ ಸಂಗ್ರಹವು ನಿರೀಕ್ಷೆಗೆ ಹತ್ತಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರೂ ಐಎಂಎಫ್ ಈ ಕ್ರಮ ಕೈಗೊಂಡಿದೆ. ವಿದ್ಯುತ್ ದರ ಹೆಚ್ಚಳದ ವಿರುದ್ಧ ಬಡವರಿಗೆ ಸಬ್ಸಿಡಿ ರೂಪದಲ್ಲಿ ಪರಿಹಾರ ಒದಗಿಸುವ ಸರಕಾರದ ಪ್ರಸ್ತಾವನೆಗೆ ಐಎಂಎಫ್‍ನಿಂದ ವ್ಯಕ್ತವಾದ ಗಂಭೀರ ಆಕ್ಷೇಪಕ್ಕೆ ಪ್ರತಿಯಾಗಿ ಮುಂಬರುವ ತ್ರೈಮಾಸಿಕ ಶುಲ್ಕದ ಹೊಂದಾಣಿಕೆ (ಕ್ಯೂಟಿಎ) ಮತ್ತು ತೈಲ ದರ ಹೊಂದಾಣಿಕೆ(ಎಫ್‍ಪಿಎ)ಯಂತೆ ಪ್ರತೀ ಯೂನಿಟ್‍ಗೆ 7.50 ರೂ.ಯನ್ನು ಮುಂದಿನ 4ರಿಂದ ತಿಂಗಳಲ್ಲಿ ಸರಿದೂಗಿಸುವ ಪ್ರಸ್ತಾಪವನ್ನು ಸರಕಾರ ಮುಂದಿರಿಸಿತ್ತು.