ಜೈಲುಶಿಕ್ಷೆ ವಿರುದ್ಧ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ ಇಮ್ರಾನ್

Update: 2024-02-16 17:47 GMT

ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌‌ (Photo: PTI)

ಇಸ್ಲಮಾಬಾದ್: ಸೈಫರ್ ಪ್ರಕರಣ ಹಾಗೂ ತೋಷಖಾನಾ ಪ್ರಕರಣಗಳಲ್ಲಿ ತನಗೆ ಜೈಲುಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಮುಖಂಡ ಇಮ್ರಾನ್‍ಖಾನ್ ಇಸ್ಲಮಾಬಾದ್ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಎರಡೂ ಶಿಕ್ಷೆಗಳನ್ನು ರದ್ದು ಮಾಡುವಂತೆ ಕೋರಿ ಇಮ್ರಾನ್ ಪರ ವಕೀಲರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸೈಫರ್ ಪ್ರಕರಣದಲ್ಲಿ ಇಮ್ರಾನ್‍ಖಾನ್‍ಗೆ 10 ವರ್ಷ, ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷ ಜೈಲುಶಿಕ್ಷೆ ಘೋಷಿಸಲಾಗಿದೆ. ಇಮ್ರಾನ್ ಖಾನ್‍ಗೆ ತನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ನ್ಯಾಯಯುತ ವಿಚಾರಣೆಗೆ ಅವಕಾಶ ನೀಡದೆ ವಿಚಾರಣಾ ನ್ಯಾಯಾಲಯ ತರಾತುರಿಯಲ್ಲಿ ತೀರ್ಪು ಪ್ರಕಟಿಸಿದೆ ಎಂದು ಮೇಲ್ಮನವಿಯಲ್ಲಿ ಪ್ರತಿಪಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News