ಕೆನಡಾದ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ ; ಗುಪ್ತಚರ ವರದಿಯಲ್ಲಿ ಆರೋಪ

Update: 2024-02-02 17:11 GMT

ಜಸ್ಟಿನ್ ಟ್ರೂಡೊ | Photo:NDTV

ಒಟ್ಟಾವ : ಕೆನಡಾದ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ನಡೆಸಿದೆ ಎಂದು ಕೆನಡಾ ಭದ್ರತಾ ಇಲಾಖೆ ಬಹಿರಂಗಪಡಿಸಿದ ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2019 ಮತ್ತು 2019ರ ಫೆಡರಲ್ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ನಡೆಸಿತ್ತು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆದೇಶಿಸಿದ್ದರು. ಕೆನಡಾದ ರಾಜಕೀಯದಲ್ಲಿ ವಿದೇಶಿ ಹಸ್ತಕ್ಷೇಪ ಜಾಲಗಳು ಆಳವಾಗಿ ಅಂತರ್ಗತವಾಗಿವೆ ಮತ್ತು ಸರಕಾರದ ಪ್ರತಿಯೊಂದು ಹಂತದಲ್ಲೂ ಕಾರ್ಯನಿರ್ವಹಿಸುತ್ತದೆ. ವಿದೇಶಿ ಹಸ್ತಕ್ಷೇಪವು ಕೆನಡಾದ ಪ್ರಜಾಪ್ರಭುತ್ವವನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ ಎಂದು ವರದಿಯಲ್ಲಿ ಎಚ್ಚರಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ `ಗ್ಲೋಬಲ್ ನ್ಯೂಸ್' ವರದಿ ಮಾಡಿದೆ. ವಿದೇಶಿ ಹಸ್ತಕ್ಷೇಪದ ಜಾಲಗಳು ಕೆನಡಾದ್ಯಂತ, ಮತ್ತು ಸರಕಾರದ ಎಲ್ಲಾ ಹಂತಗಳಲ್ಲೂ ಸಕ್ರಿಯವಾಗಿದೆ. ಇದರಲ್ಲಿ ಹಲವು ಜಾಲಗಳು ಕೆನಡಾದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿದೆ' ಎಂದು ವರದಿ ಹೇಳಿದೆ.

ವರದಿಯ ಕೆಲವು ಭಾಗಗಳನ್ನು ಮಾತ್ರ ಬಹಿರಂಗಗೊಂಡಿದ್ದು ಇದರಲ್ಲಿ ಯಾವುದೇ ದೇಶದ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ ಉನ್ನತ ಮೂಲಗಳ ಪ್ರಕಾರ, ವರದಿಯ ಉಳಿದ ಭಾಗಗಳಲ್ಲಿ ಭಾರತ ಮತ್ತು ಚೀನಾದ ಹೆಸರಿದೆ. ಒಂದು ಪುಟದಲ್ಲಿ `ಭಾರತವು ವಿದೇಶಿ ಹಸ್ತಕ್ಷೇಪ ಚಟುವಟಿಕೆಯಲ್ಲಿ ತೊಡಗಿದೆ' ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಭಾರತದ ಪಾತ್ರದ ಕುರಿತ ದಾಖಲೆಯನ್ನು ಅತಿಯಾಗಿ ಪರಿಷ್ಕರಿಸಲಾಗಿದೆ' ಎಂದು ಗ್ಲೋಬಲ್ ನ್ಯೂಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News