ಇರಾನ್| ಕಟ್ಟಡ ಕುಸಿತ; ಇಬ್ಬರು ಪೊಲೀಸರ ಸಹಿತ 4 ಮಂದಿ ಮೃತ್ಯು
Update: 2023-08-07 16:27 GMT
ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಸಂದರ್ಭ ಅಕಾಸ್ಮಾತಾಗಿ ಹಲವು ಕಟ್ಟಡಗಳು ಕುಸಿದು ಬಿದ್ದ ಕಾರಣ ಇಬ್ಬರು ಪೊಲೀಸರು ಮೃತಪಟ್ಟು ಇತರ 11 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಟೆಹ್ರಾನ್ ನ ನೈಋತ್ಯದಲ್ಲಿ ಅಕ್ರಮ ಕಟ್ಟಡವೊಂದನ್ನು ನೆಲಸಮಗೊಳಿಸುವ ಸಂದರ್ಭ ಅದಕ್ಕೆ ತಾಗಿಕೊಂಡಿದ್ದ ಇತರ 5 ಕಟ್ಟಡಗಳೂ ಕುಸಿದಿವೆ. ಆಗ ಕಟ್ಟಡದಡಿ ಸಿಲುಕಿ ಇಬ್ಬರು ಪೊಲೀಸರು ಹಾಗೂ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು ಇತರ 11 ಮಂದಿ ಗಾಯಗೊಂಡಿದ್ದಾರೆ. ಈ ಕಟ್ಟಡಗಳನ್ನು ಸೂಕ್ತ ಯೋಜನೆಗಳಿಲ್ಲದೆ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಐಎಸ್ಎನ್ಎ ಸುದ್ಧಿಸಂಸ್ಥೆ ವರದಿ ಮಾಡಿದೆ. ಕಳೆದ 2 ವರ್ಷಗಳಲ್ಲಿ ಅಧಿಕಾರಿಗಳು 46,000ಕ್ಕೂ ಅಧಿಕ ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ ಎಂದು ವರದಿ ಹೇಳಿದೆ.