ಭಾರತದ ಪ್ರವಾಸಿಗರಿಗೆ ವೀಸಾ ಅವಶ್ಯಕತೆ ರದ್ದುಗೊಳಿಸಿದ ಇರಾನ್

Update: 2023-12-15 16:36 GMT

ಸಾಂದರ್ಭಿಕ ಚಿತ್ರ | Photo: PTI

ಟೆಹ್ರಾನ್: ಭಾರತ ಸೇರಿದಂತೆ 33 ದೇಶಗಳ ಪ್ರವಾಸಿಗರು ಇನ್ನು ಮುಂದೆ ಇರಾನ್‌ ಗೆ ಹೋಗಲು ವೀಸಾದ ಅಗತ್ಯವಿರುವುದಿಲ್ಲ. ಪ್ರಪಂಚದಾದ್ಯಂತದ ದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಇರಾನ್‌ ಗೆ ಪ್ರಯಾಣಿಸುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಇರಾನ್ ಸರಕಾರ ಘೋಷಿಸಿದೆ.

ಇಸ್ಲಾಮಿಕ್ ಗಣರಾಜ್ಯ(ಇರಾನ್) ವಿಶ್ವದಾದ್ಯಂತ ಜನರಿಗೆ ಬಾಗಿಲು ತೆರೆಯಲು ಮತ್ತು ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಿದ್ಧವಾಗಿದೆ. ಇದರಿಂದ ಅವರು ನಮ್ಮ ದೇಶಕ್ಕೆ ಸುಲಭವಾಗಿ ಭೇಟಿ ನೀಡಬಹುದು ಮತ್ತು ಈ ಸೌಲಭ್ಯಗಳ ಪ್ರಯೋಜನ ಪಡೆಯಬಹುದು ಎಂದು ಇರಾನ್ ಪ್ರವಾಸೋದ್ಯಮ ಮತ್ತು ಕರಕುಶಲ ಇಲಾಖೆ ಹೇಳಿದೆ.

32 ದೇಶಗಳ ನಾಗರಿಕರಿಗೆ ವೀಸಾ ಅಗತ್ಯವನ್ನು ಮನ್ನಾ ಮಾಡುವುದರೊಂದಿಗೆ ಇರಾನ್‌ ಗೆ ವೀಸಾದ ಅಗತ್ಯವಿಲ್ಲದೆ ಭೇಟಿ ನೀಡಲು ಅವಕಾಶ ಪಡೆದ ದೇಶಗಳ ಸಂಖ್ಯೆ 45ಕ್ಕೇರಿದೆ. ನಮ್ಮ ತೆರೆದ ಬಾಗಿಲು ನೀತಿಯು ವಿವಿಧ ದೇಶಗಳೊಂದಿಗೆ ತೊಡಗಿಸಿಕೊಳ್ಳಲು ಇರಾನ್ ನಿರ್ಣಯವನ್ನು ಪ್ರದರ್ಶಿಸುತ್ತದೆ' ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News