ಇಸ್ರೇಲನ್ನು ವಿಶ್ವಸಂಸ್ಥೆಯಿಂದ ಹೊರಹಾಕಲು ಇರಾನ್ ಆಗ್ರಹ
Update: 2024-02-11 17:27 GMT
ಟೆಹ್ರಾನ್ : ಇಸ್ರೇಲ್ ಅನ್ನು ಜಾಗತಿಕ ವೇದಿಕೆಯಲ್ಲಿ ಒಬ್ಬಂಟಿಯಾಗಿಸಬೇಕು ಮತ್ತು ಗಾಝಾದಲ್ಲಿ ಆ ದೇಶ ಮುಂದುವರಿಸಿರುವ ಅಪರಾಧ ಕೃತ್ಯಗಳಿಗಾಗಿ ವಿಶ್ವಸಂಸ್ಥೆಯಿಂದ ಹೊರಹಾಕಬೇಕು ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪುನರುಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ ನಿರ್ಣಯವನ್ನು ನಿರಂತರ ಉಲ್ಲಂಘಿಸುತ್ತಿರುವ ಇಸ್ರೇಲ್ ಅನ್ನು ವಿಶ್ವಸಂಸ್ಥೆಯಿಂದ ಉಚ್ಛಾಟಿಸಬೇಕೆಂದು ಆಗ್ರಹಿಸುವ ಪ್ರಸ್ತಾವನೆಯನ್ನು ಇರಾನ್ ವಿಶ್ವಸಂಸ್ಥೆಯಲ್ಲಿ ಮಂಡಿಸಲಿದೆ ಎಂದು ದೇಶದ ಜನರನ್ನುದ್ದೇಶಿಸಿ ಮಾತನಾಡಿದ ರೈಸಿ ಹೇಳಿದ್ದಾರೆ.
ಗಾಝಾ ಪಟ್ಟಿಯಲ್ಲಿ ಫೆಲಸ್ತೀನೀಯರ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್‍ದಾಳಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದ ಅವರು, ಇಸ್ರೇಲ್‍ನ ಅವನತಿ ಈಗ ಆರಂಭವಾಗಿದೆ ಎಂದರು.