ಇಸ್ರೇಲ್ ಗುಪ್ತಚರ ಸಂಸ್ಥೆಯ ಏಜಂಟ್‍ನನ್ನು ಗಲ್ಲಿಗೇರಿಸಿದ ಇರಾನ್

Update: 2023-12-16 17:19 GMT

ಇರಾನ್ - Photo: freepik.com

ಟೆಹ್ರಾನ್: ಇಸ್ರೇಲ್‍ನ ಗುಪ್ತಚರ ಸಂಸ್ಥೆ `ಮೊಸಾದ್'ನ ಏಜೆಂಟನನ್ನು ಶನಿವಾರ ಇರಾನ್‍ನ ಆಗ್ನೇಯ ಸಿಸ್ತಾನ್-ಬಲೂಚೆಸ್ತಾನ್ ಪ್ರಾಂತದಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ `ಇರ್ನಾ' ಸುದ್ಧಿಸಂಸ್ಥೆ ವರದಿ ಮಾಡಿದೆ.

ಈ ವ್ಯಕ್ತಿಯು ವಿದೇಶಿ ಸಂಸ್ಥೆಗಳೊಂದಿಗೆ, ನಿರ್ದಿಷ್ಟವಾಗಿ ಮೊಸಾದ್ ಜತೆ, ಸಂಪರ್ಕದಲ್ಲಿದ್ದ ಮತ್ತು ಸರಕಾರದ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ. ಸಹವರ್ತಿಗಳ ನೆರವಿನಿಂದ ಇವುಗಳನ್ನು ಮೊಸಾದ್ ಸಹಿತ ವಿದೇಶಿ ಸಂಸ್ಥೆಗಳಿಗೆ ಒದಗಿಸುತ್ತಿದ್ದ. ಆರೋಪಿಯು ಇಸ್ಲಾಮಿಕ್ ಗಣರಾಜ್ಯವನ್ನು ವಿರೋಧಿಸುವ ಗುಂಪುಗಳ ದುರುದ್ದೇಶದ ಕೃತ್ಯಗಳಿಗೆ ಪ್ರಚೋದನೆ ನೀಡುವ ಉದ್ದೇಶದಿಂದ ಈ ದಾಖಲೆಗಳನ್ನು ಮೊಸಾದ್ ಅಧಿಕಾರಿಗೆ ಹಸ್ತಾಂತರಿಸಿದ್ದ' ಎಂದು ವರದಿ ಹೇಳಿದೆ.

ಶಿಕ್ಷೆಗೊಳಗಾದ ವ್ಯಕ್ತಿಯ ಹೆಸರನ್ನು ಪತ್ರಿಕೆ ಬಹಿರಂಗಪಡಿಸಿಲ್ಲ. ಆದರೆ ಆತ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News