ಇರಾನ್: ಇಬ್ಬರು ಮಹಿಳಾ ಪತ್ರಕರ್ತರಿಗೆ ಜೈಲುಶಿಕ್ಷೆ

Update: 2023-09-04 17:37 GMT

ಸಾಂದರ್ಭಿಕ ಚಿತ್ರ

ಟೆಹ್ರಾನ್ : ಪಿತೂರಿ ಮತ್ತು ಒಳಸಂಚಿಗಾಗಿ ಇರಾನ್‍ನ ಇಬ್ಬರು ಮಹಿಳಾ ಪತ್ರಕರ್ತರನ್ನು ಮೂರು ವರ್ಷದ ಭಾಗಶಃ ಅಮಾನತುಗೊಂಡ ಜೈಲುಶಿಕ್ಷೆಯ ಭಾಗವಾಗಿ ಸುಮಾರು 1 ತಿಂಗಳ ಸೆರೆವಾಸ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ರವಿವಾರ ವರದಿ ಮಾಡಿವೆ.

ನೇಗಿನ್ ಬಘೇರಿ ಮತ್ತು ಎಲ್ನಾಝ್ ಮುಹಮ್ಮದಿ ಶಿಕ್ಷೆಗೊಳಗಾದವರು. ಶಿಕ್ಷೆಯ ಪ್ರಕಾರ, ಇವರಿಬ್ಬರು ಶಿಕ್ಷಾವಧಿಯ 40ನೇ ಒಂದು ಭಾಗವನ್ನು ಅಥವಾ ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಯನ್ನು ಜೈಲಿನಲ್ಲಿ ಕಳೆಯಲಿದ್ದಾರೆ. ಉಳಿದ ಶಿಕ್ಷಾವಧಿಯನ್ನು 5 ವರ್ಷಗಳಲ್ಲಿ ಅಮಾನತುಗೊಳಿಸಲಾಗಿದೆ. ಈ ಅವಧಿಯಲ್ಲಿ ಅವರು ವೃತ್ತಿಪರ ನೀತಿಶಾಸ್ತ್ರದ ತರಬೇತಿ ಪಡೆಯಬೇಕಾಗುತ್ತದೆ ಮತ್ತು ದೇಶವನ್ನು ತೊರೆಯುವುದನ್ನು ನಿಷೇಧಿಸಲಾಗಿದೆ ಎಂದು ವರದಿ ಹೇಳಿದೆ.

ಎಲ್ನಾಝ್ ಮುಹಮ್ಮದಿ ಕೆಲಸ ಮಾಡುತ್ತಿರುವ `ಹಮ್ ಮಿಹಾನ್' ದಿನಪತ್ರಿಕೆಯಲ್ಲೇ ಕೆಲಸ ಮಾಡುತ್ತಿದ್ದ ಆಕೆಯ ಸಹೋದರಿ ಇಲಾಹೆ, ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದ ಮಹ್ಸಾ ಅಮೀನಿಯ ಅಂತ್ಯಸಂಸ್ಕಾರದ ವರದಿ ಮಾಡಿದ ಕಾರಣಕ್ಕೆ 2022ರ ಸೆಪ್ಟಂಬರ್ನಲ್ಲಿ ಬಂಧನದಲ್ಲಿದ್ದಾರೆ. ಎಲ್ನಾಝ್‍ರನ್ನು ಫೆಬ್ರವರಿಯಲ್ಲಿ ಬಂಧಿಸಿದ್ದು ಬಂಧನದ ಕಾರಣ ಸ್ಪಷ್ಟವಾಗಿಲ್ಲ. ನೇಗಿನ್ ಬಘೇರಿ `ಹಫ್ತೆ ಸೋಭ್' ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News