ಹಮಾಸ್ ಮುಖ್ಯಸ್ಥನ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ದಾಳಿ ನಡೆಸಲು ಇರಾನ್ ಸರ್ವೋಚ್ಚ ನಾಯಕ ಅದೇಶ: ವರದಿ

Update: 2024-08-01 06:18 GMT

ಇರಾನ್ ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ (PTI)

ಟೆಹ್ರಾನ್: ಟೆಹ್ರಾನ್ ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ನೇರ ದಾಳಿ ನಡೆಸುವಂತೆ ಇರಾನ್ ನ ಸರ್ವೋಚ್ಚ ನಾಯಕರಾದ ಅಯಾತುಲ್ಲಾ ಅಲಿ ಖಾಮಿನೈ  ಆದೇಶಿಸಿದ್ದಾರೆ ಎಂದು ರೆವಲ್ಯೂಷನರಿ ಗಾರ್ಡ್ಸ್ ನ ಇಬ್ಬರು ಸದಸ್ಯರು ಸೇರಿದಂತೆ ಆದೇಶವನ್ನು ಸಂಕ್ಷಿಪ್ತವಾಗಿ ವಿವರಿಸಿರುವ ಮೂವರು ಇರಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಹಮಾಸ್ ಮುಖ್ಯಸ್ಥ ಹನಿಯೆಹ್ ಅವರನ್ನು ಹತ್ಯೆಗೈಯ್ಯಲಾಗಿದೆ ಎಂದು ಇರಾನ್ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಬುಧವಾರ ನಡೆದ ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಖಾಮಿನೈ ಈ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

ಹನಿಯೆಹ್ ಹತ್ಯೆಗೆ ಇಸ್ರೇಲ್ ಕಾರಣ ಎಂದು ಇರಾನ್ ಮತ್ತು ಹಮಾಸ್ ಆರೋಪಿಸಿವೆ. ಆದರೆ, ಮಂಗಳವಾರ ಇರಾನ್ ನ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಟೆಹ್ರಾನ್ ಗೆ ತೆರಳಿದ್ದ ಇಸ್ಮಾಯಿಲ್ ಹನಿಯೆಹ್ ಹತ್ಯೆಯನ್ನು ಗಾಝಾ ಪಟ್ಟಿಯಲ್ಲಿ ಹಮಾಸ್ ನೊಂದಿಗೆ ಯುದ್ಧದಲ್ಲಿ ತೊಡಗಿರುವ ಇಸ್ರೇಲ್ ದೃಢಪಡಿಸಿಯೂ ಇಲ್ಲ ಅಥವಾ ನಿರಾಕರಿಸಿಯೂ ಇಲ್ಲ.

ಗಮನಾರ್ಹ ಸಂಗತಿಯೆಂದರೆ, ಇರಾನ್ ನ ಪರಮಾಣು ವಿಜ್ಞಾನಿಗಳು, ಸೇನಾ ಕಮಾಂಡರ್ ಗಳು ಸೇರಿದಂತೆ ಹಲವು ಶತ್ರುಗಳನ್ನು ವಿದೇಶಗಳಲ್ಲಿ ಹತ್ಯೆಗೈದಿರುವ ಇತಿಹಾಸ ಇಸ್ರೇಲ್ ಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News