ಜಪಾನ್‌ನಲ್ಲಿ ಪ್ರಬಲ ಭೂಕಂಪನ; ಸುನಾಮಿ ಎಚ್ಚರಿಕೆ

Update: 2024-01-01 08:53 GMT

ಸಾಂದರ್ಭಿಕ ಚಿತ್ರ (PTI)

ಟೋಕಿಯೋ: ಉತ್ತರ-ಮಧ್ಯ ಜಪಾನ್‌ನಲ್ಲಿ ಇಂದು ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪನದಲ್ಲಿ 7.4 ತೀವ್ರತೆಯನ್ನು ಈ ಭೂಕಂಪ ದಾಖಲಿಸಿದ್ದು ಅಧಿಕಾರಿಗಳು ದೇಶದ ವಾಯುವ್ಯ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆಗಳನ್ನು ನೀಡಿದ್ದಾರೆ.

ಜಪಾನ್‌ ಹವಾಮಾನ ಏಜನ್ಸಿ ನೀಡಿದ ಮಾಹಿತಿಯಂತೆ ಭೂಕಂಪವು ಇಶಿಕಾವ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಭವಿಸಿದೆ. ಇದರ ಬೆನ್ನಲ್ಲೇ ಇಶಿಕಾವ, ನಿಗಾಟ ಮತ್ತು ತೊಯಮಾ ಕರಾವಳಿಗಳಲ್ಲಿ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ.

ರಾಜಧಾನಿ ಟೋಕಿಯೋ ಮತ್ತು ಕ್ಯಾಂಟೊ ಪ್ರದೇಶಗಳಲ್ಲೂ ಕಂಪನಗಳ ಅನುಭವವಾಗಿದೆ.

ಕರಾವಳಿ ಪ್ರದೇಶಗಳಿಂದ ದೂರ ಹೋಗುವಂತೆ ಹಾಗೂ ಕಟ್ಟಡಗಳ ಮೇಲಂತಸ್ತುಗಳಿಗೆ ಅಥವಾ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಜನರಿಗೆ ಸೂಚಿಸಲಾಯಿತು.

ಇಶಿಕಾವಾದ ನೋಟೋ ಕರಾವಳಿಯಲ್ಲಿ ಐದು ಮೀಟರ್‌ ಎತ್ತರದಲ್ಲಿ ಅಲೆಗಳು ಅಪ್ಪಳಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News