ಕದನ ವಿರಾಮಕ್ಕೆ ಸಂಬಂಧಿಸಿ ಖತರ್ ಮಧ್ಯಸ್ಥಿಕೆಯಿಂದ ಹಿಂದೆ ಸರಿದಿದೆ ಎಂಬ ಮಾಧ್ಯಮ ವರದಿಗಳು ನಿಖರವಾಗಿಲ್ಲ: ಖತರ್ ಸ್ಪಷ್ಟನೆ

Update: 2024-11-10 06:08 GMT

ಖತರ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಡಾ. ಮಜಿದ್ ಬಿನ್ ಮೊಹಮ್ಮದ್ ಅಲ್ ಅನ್ಸಾರಿ‌ (credit: qna.org.qa)

ದೋಹಾ: ಗಾಝಾದಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಖತರ್ ಮಧ್ಯಸ್ಥಿಕೆಯಿಂದ ಹಿಂದೆ ಸರಿದಿದೆ ಎಂಬ ಮಾಧ್ಯಮ ವರದಿಗಳು ನಿಖರವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಡಾ. ಮಜಿದ್ ಬಿನ್ ಮೊಹಮ್ಮದ್ ಅಲ್ ಅನ್ಸಾರಿ ಸ್ಪಷ್ಟಪಡಿಸಿದ್ದಾರೆ.

10 ದಿನಗಳ ಮೊದಲು ಕದನ ವಿರಾಮದ ಕುರಿತ ಕೊನೆಯ ಪ್ರಯತ್ನಗಳ ಸಮಯದಲ್ಲಿ ಆ ಸುತ್ತಿನಲ್ಲಿ ಒಪ್ಪಂದಕ್ಕೆ ಬರದಿದ್ದರೆ ಹಮಾಸ್ ಮತ್ತು ಇಸ್ರೇಲ್ ನಡುವೆ ಮಧ್ಯಸ್ಥಿಕೆ ವಹಿಸುವ ತನ್ನ ಪ್ರಯತ್ನಗಳನ್ನು ಸ್ಥಗಿತಗೊಳಿಸುವುದಾಗಿ ಎರಡು ಪಕ್ಷಗಳ ಜೊತೆ ಹೇಳಿಕೊಳ್ಳಲಾಗಿತ್ತು. ಗಾಝಾ ಪಟ್ಟಿಯಲ್ಲಿ ದುರಂತ ಮಾನವೀಯ ಪರಿಸ್ಥಿತಿಗಳಿಂದ ಉಂಟಾದ ಕ್ರೂರ ಯುದ್ಧ ಮತ್ತು ನಾಗರಿಕರ ನೋವನ್ನು ಕೊನೆಗೊಳಿಸಲು ಎರಡೂ ಪಕ್ಷಗಳು ತಮ್ಮ ಇಚ್ಛೆ ಮತ್ತು ಗಂಭೀರತೆಯನ್ನು ತೋರ್ಪಡಿಸಿದಾಗ ಖತರ್ ಪಾಲುದಾರರೊಂದಿಗೆ ಆ ಪ್ರಯತ್ನಗಳನ್ನು ಮುಂದುವರಿಸಲಿದೆ. ಯುದ್ಧವನ್ನು ಕೊನೆಗೊಳಿಸಲು ಮತ್ತು ಒತ್ತೆಯಾಳುಗಳ ಮತ್ತು ಕೈದಿಗಳ ಬಿಡುಗಡೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವಲ್ಲಿ ಮುಂಚೂಣಿಯಲ್ಲಿರಲಿದೆ ಎಂದು ಖತರ್ ಒತ್ತಿಹೇಳಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರರು ತಮ್ಮ ಎಲ್ಲಾ ಹಕ್ಕುಗಳನ್ನು ಪಡೆಯುವವರೆಗೂ ಫೆಲೆಸ್ತೀನ್ ಜನರನ್ನು ಬೆಂಬಲಿಸಲು ಖತರ್ ದೇಶದ ದೃಢವಾದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಪೂರ್ವ ಜೆರುಸಲೆಮ್ ರಾಜಧಾನಿಯಾಗಿ ಫೆಲೆಸ್ತೀನ್ ಸ್ವತಂತ್ರ ರಾಜ್ಯವಾಗುವುದನ್ನು ಖತರ್ ಬಯಸುತ್ತದೆ. ಖತರ್ ಗೆ ಫೆಲೆಸ್ತೀನ್ ಸಮಸ್ಯೆಯ ಮುಖ್ಯವಾಗಿದೆ ಎಂದು ಒತ್ತಿ ಹೇಳಿದ್ದಾರೆ.

ಕದನ ವಿರಾಮದ ಕುರಿತ ಮಾಧ್ಯಮ ವರದಿಗಳು ನಿಖರವಾಗಿಲ್ಲ ಎಂದು ಡಾ. ಅಲ್ ಅನ್ಸಾರಿ ಹೇಳಿದ್ದು, ಕದನ ವಿರಾಮಕ್ಕೆ ಸಂಬಂಧಿಸಿ ಎರಡು ಪಕ್ಷಗಳ ನಡುವೆ ಮಧ್ಯಸ್ಥಿಕೆ( ಸಂವಹನ ಮಾಧ್ಯಮವಾಗುವುದು) ಖತರ್ ನ ಗುರಿಯಾಗಿದೆ. ಈ ಮೊದಲಿನ ಹಂತಗಳಲ್ಲಿ ಕದನ ವಿರಾಮವನ್ನು ಸಾಧಿಸುವ ಮಧ್ಯಸ್ಥಿಕೆ ಯಶಸ್ವಿಯಾಗಿದೆ. ಕಳೆದ ವರ್ಷದ ನವೆಂಬರ್ ನಲ್ಲಿ ಖತರ್ ಮಧ್ಯಸ್ಥಿಕೆ ಮೂಲಕ ಒತ್ತೆಯಾಳುಗಳು ಮತ್ತು ಬಂಧಿತರನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಮತ್ತು ಗಾಝಾ ಪಟ್ಟಿಯಲ್ಲಿ ಶಾಂತಿ ಕಾಪಾಡಲು ಮಧ್ಯಸ್ಥಿಕೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News