ಲೆಬನಾನ್ ಸಂಘರ್ಷ | ಮಧ್ಯಪ್ರಾಚ್ಯಕ್ಕೆ ಹೆಚ್ಚುವರಿ ಸೈನಿಕರ ರವಾನೆಗೆ ಅಮೆರಿಕ ನಿರ್ಧಾರ

Update: 2024-09-24 16:25 GMT

PC : PTI

ವಾಶಿಂಗ್ಟನ್ : ಲೆಬನಾನ್‌ನಲ್ಲಿ ಇಸ್ರೇಲ್ ಹಾಗೂ ಹಿಜ್ಬುಲ್ಲಾ ಹೋರಾಟಗಾರರ ನಡುವೆ ಸಂಘರ್ಷ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕವು ಮಧ್ಯ ಪ್ರಾಚ್ಯಕ್ಕೆ ಹೆಚ್ಚುವರಿ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ಕಳುಹಿಸಲು ತೀರ್ಮಾನಿಸಿದೆಯೆಂದು ಆ ದೇಶದ ರಕ್ಷಣಾ ಕಾರ್ಯಾಲಯ ಪೆಂಟಾಗನ್‌ನ ಪತ್ರಿಕಾ ಕಾರ್ಯದರ್ಶಿ ಮೇಜರ್ ಜನರಲ್ ಪ್ಯಾಟ್‌ರೈಡರ್ ತಿಳಿಸಿದ್ದಾರೆ. ಆದರೆ ಎಷ್ಟು ಸಂಖ್ಯೆಯ ಸೈನಿಕರನ್ನು ಮಧ್ಯ ಪ್ರಾಚ್ಯದಲ್ಲಿ ಅಮೆರಿಕ ಹೊಸದಾಗಿ ನಿಯೋಜಿಸಲಿದೆಯೆಂಬ ಬಗ್ಗೆ ಅವರು ವಿವರಗಳನ್ನು ನೀಡಿಲ್ಲ. ಪ್ರಸಕ್ತ ಈ ಪ್ರದೇಶದಲ್ಲಿ 40 ಸಾವಿರಕ್ಕೂ ಅಧಿಕ ಅಮೆರಿಕನ್ ಯೋಧರಿದ್ದಾರೆ.

ಅಮೆರಿಕದ ಯುದ್ಧವಿಮಾನ ವಾಹಕ ನೌಕೆ ಯು.ಎಸ್.ಎಸ್. ‘ಹ್ಯಾರಿ ಎಸ್.ಟ್ರೂಮರ್’ ಮಂಗಳವಾರ ವರ್ಜೀನಿಯಾದ ನಾರ್ಕ್ ನೌಕಾನೆಲೆಯಿಂದ ಮಧ್ಯಏಶ್ಯಾಕ್ಕೆ ಪ್ರಯಾಣವನ್ನು ಆರಂಭಿಸಿರುವುದಾಗಿ ವರದಿಯಾಗಿದೆ. ಒಂದು ವೇಳೆ ಸಂಘರ್ಷ ತೀವ್ರಗೊಂಡಲ್ಲಿ ಈಗಾಗಲೇ ಆ ಪ್ರದೇಶದಲ್ಲಿ ನಿಯೋಜಿತವಾಗಿರುವ ಯುದ್ಧವಿಮಾನವಾಹಕ ನೌಕೆ ‘ಯು.ಎಸ್.ಎಸ್. ಅಬ್ರಾಹಂ ಲಿಂಕನ್’ ಅನ್ನು ಕೂಡಾ ಅಮೆರಿಕ ಬಳಸಿಕೊಳ್ಳಲಿದೆ ಎಂದು ಪಾಶ್ಚಾತ್ಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News