ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಒಬ್ಬ ಮೃತ್ಯು ; 4 ಯೋಧರಿಗೆ ಗಾಯ
Update: 2024-12-09 16:58 GMT
ಬೈರೂತ್ : ದಕ್ಷಿಣ ಲೆಬನಾನ್‍ನಲ್ಲಿ ಸೋಮವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಇದು ಹಿಜ್ಬುಲ್ಲಾ-ಇಸ್ರೇಲ್ ನಡುವಿನ ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಲೆಬನಾನ್ ಸೇನೆ ಹೇಳಿದೆ.
ದಕ್ಷಿಣ ಲೆಬನಾನ್‍ನ ಬಿಂಟ್ ಜಬೆಲಿ ಮಿಲಿಟರಿ ಚೆಕ್‍ಪೋಸ್ಟ್ ಬಳಿ ಕಾರೊಂದನ್ನು ಗುರಿಯಾಗಿಸಿ ಇಸ್ರೇಲಿ ಶತ್ರುಗಳು ದಾಳಿ ನಡೆಸಿದ್ದಾರೆ. ಓರ್ವ ಪ್ರಜೆ ಸಾವನ್ನಪ್ಪಿದ್ದು ನಾಲ್ವರು ಯೋಧರು ಗಾಯಗೊಂಡಿದ್ದಾರೆ ಎಂದು ಸೇನೆಯ ಹೇಳಿಕೆ ತಿಳಿಸಿದೆ. ಸೇನಾ ಚೆಕ್‍ಪೋಸ್ಟ್ ಬಳಿ ಕಾರೊಂದರ ಮೇಲೆ ಶತ್ರುಗಳ ವಿಮಾನ ನಡೆಸಿದ ದಾಳಿಯಲ್ಲಿ ಚಾಲಕ ಸಾವನ್ನಪ್ಪಿದ್ದಾನೆ ಎಂದು ಲೆಬನಾನ್‍ನ ನ್ಯಾಷನಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.