ಅಮೆರಿಕದಲ್ಲಿ ಲಘು ವಿಮಾನ ಪತನ, ಇಬ್ಬರು ಸಾವು; 4 ವಾಹನಗಳಿಗೆ ಬೆಂಕಿ

Update: 2024-02-02 16:40 GMT

Photo: NDTV 

ನ್ಯೂಯಾರ್ಕ್: ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ಮೊಬೈಲ್(ಚಲಿಸುವ) ಮನೆಗಳ ಪ್ರದೇಶದ ಮೇಲೆ ಲಘು ವಿಮಾನವೊಂದು ಪತನಗೊಂಡಿದ್ದು ಪೈಲಟ್ ಸಹಿತ ಇಬ್ಬರು ಮೃತಪಟ್ಟಿದ್ದಾರೆ. ಕನಿಷ್ಠ 4 ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ವೆರೊ ಬೀಚ್ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಹೊರಟಿದ್ದ ಏಕ ಇಂಜಿನ್‍ನ ಲಘು ವಿಮಾನ ಸೈಂಟ್ ಪೀಟರ್ಸ್‍ಬರ್ಗ್ ಬಳಿಯ ಕ್ಲಿಯರ್‍ವಾಟರ್ ನಗರದ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ವಿಮಾನದ ಇಂಜಿನ್‍ನಲ್ಲಿನ ಸಮಸ್ಯೆಯಿಂದಾಗಿ `ಜಪಾನೀಸ್ ಗಾರ್ಡನ್' ಎಂದೂ ಕರೆಯಲಾಗುವ `ಬೇಸೈಡ್ ವಾಟರ್ಸ್ ಮೊಬೈಲ್ ಹೋಮ್ ಪಾರ್ಕ್'ನಲ್ಲಿ ಪತನಗೊಂಡಿದೆ. ಪೈಲಟ್ ಹಾಗೂ ಸ್ಥಳೀಯ ನಿವಾಸಿ ಮೃತಪಟ್ಟಿದ್ದು 4 ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ತಂಡ ಹಾಗೂ ರಕ್ಷಣಾ ತಂಡ ಬೆಂಕಿಯನ್ನು ನಿಯಂತ್ರಿಸಿದೆ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಸ್ಕಾಟ್ ಎಹ್ಲರ್ಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News