ಮಾಲ್ದೀವ್ಸ್ ಅಧ್ಯಕ್ಷೀಯ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿ ಮುಹಮ್ಮದ್ ಮುಇಝ್ಝ್ ಗೆ ಗೆಲುವು
Update: 2023-10-01 08:35 GMT
ಮಾಲ್ದೀವ್ಸ್: ಮಾಲ್ದೀವ್ಸ್ನಲ್ಲಿ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾ ಪರ ನಿಲುವು ಇರುವ ಅಭ್ಯರ್ಥಿ ಮುಹಮ್ಮದ್ ಮುಯಿಝು ಗೆಲುವು ಸಾಧಿಸಿದ್ದಾರೆ. 45 ರ ಹರೆಯದ ಮುಯಿಝು ಚೀನೀ ಸಾಲಗಳ ಒಳಹರಿವಿಗೆ ಬೆಂಬಲಿಸಿದ್ದರು.
ಮುಯಿಝು ಅವರು 54.06 ಶೇಕಡಾ ಮತಗಳನ್ನು ಗಳಿಸಿದ್ದು, ಹಾಲಿ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸಾಲಿಹ್ ಅವರನ್ನು ಸೋಲಿಸಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಲ್ದೀವಿಯನ್ ವಿರೋಧ ಪಕ್ಷದ ಅಭ್ಯರ್ಥಿ ಮುಹಮ್ಮದ್ ಮುಯಿಝು 53% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ್ದಾರೆ, ಹಾಲಿ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸಾಲಿಹ್ ಅವರನ್ನು 18,000 ಮತಗಳಿಂದ ಸೋಲಿಸಿದರು.