ಪ್ರಧಾನಿ ಮೋದಿಗೆ ಮಾರಿಷಸ್‌ನ ಅತ್ಯುನ್ನತ ಗೌರವ

Update: 2025-03-11 22:47 IST
Narendra Modi

ನರೇಂದ್ರ ಮೋದಿ | PC : PTI 

  • whatsapp icon

ಪೋರ್ಟ್‌ಲೂಯಿಸ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರಿಷಸ್‌ನ ಅತ್ಯುತನ್ನತ ಗೌರವವಾದ ‘ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆ್ಯಂಡ್ ಕೀ ಆಫ್ ದಿ ಇಂಡಿಯನ್ ಓಷಿಯನ್’ ನೀಡಲಾಗುವುದು ಎಂದು ಮಾರಿಷಸ್ ಪ್ರಧಾನಿ ನವೀನ್ ರಾಮ್‌ಗೂಲಂ ಮಂಗಳವಾರ ಘೋಷಿಸಿದ್ದಾರೆ.

ಮೋದಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಮೊದಲ ಭಾರತೀಯ. ಭಾರತ ಹಾಗೂ ಮಾರಿಷಸ್ ನಡುವಿನ ಬಾಂಧವ್ಯವನ್ನು ಬಲಪಡಿಸಲು ನೀಡಿದ ಅವರು ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಇದು ಪ್ರಧಾನಿ ಮೋದಿಗೆ ವಿದೇಶಿ ರಾಷ್ಟ್ರದಿಂದ ನೀಡುತ್ತಿರುವ 21ನೇ ಅಂತರ ರಾಷ್ಟ್ರೀಯ ಪ್ರಶಸ್ತಿಯಾಗಿದೆ. ಈ ವಿಶಿಷ್ಟ ಮನ್ನಣೆಯನ್ನು ಸ್ವೀಕರಿಸಿದ ಐದನೇ ವಿದೇಶಿ ಪ್ರಜೆ ಮೋದಿ ಎಂದು ರಾಮ್‌ಗೂಲಂ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News