ಮುಂದಿನ ಆಡಳಿತದ ಕಾನೂನುಬದ್ಧ ಆದೇಶಗಳನ್ನು ಪಾಲಿಸಲು ಮಿಲಿಟರಿ ಬದ್ಧ : ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಸ್ಟಿನ್

Update: 2024-11-07 16:48 GMT

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಸ್ಟಿನ್ | PC : X/@SecDef

ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಕ್ರಮಬದ್ಧವಾದ, ಕಾನೂನುಬದ್ಧವಾದ ಆದೇಶಗಳನ್ನು ಪಾಲಿಸಲು ಮಿಲಿಟರಿ ಬದ್ಧವಾಗಿದೆ. ಮಿಲಿಟರಿ ರಾಜಕೀಯದಲ್ಲಿ ಒಳಗೊಳ್ಳುವುದಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.

ರಾಜಕೀಯ ಕ್ಷೇತ್ರದಿಂದ ಪ್ರತ್ಯೇಕವಾಗಿ ನಿಲ್ಲುವುದನ್ನು ಅಮೆರಿಕದ ಮಿಲಿಟರಿ ಮುಂದುವರಿಸುತ್ತದೆ. ತತ್ವ ಮತ್ತು ವೃತ್ತಿಪರತೆಯೊಂದಿಗೆ ನಮ್ಮ ಗಣರಾಜ್ಯದ ಕಾವಲು ಕಾಯಲು, ನಮ್ಮ ಭದ್ರತೆಯನ್ನು ಬಲಗೊಳಿಸುವ ನಮ್ಮ ಮೌಲ್ಯಯುತ ಮಿತ್ರರು ಮತ್ತು ಪಾಲುದಾರರೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತದೆ' ಎಂದು ಸೇನಾಪಡೆಗಳಿಗೆ ಬುಧವಾರ ರವಾನಿಸಿರುವ ಟಿಪ್ಪಣಿಯಲ್ಲಿ ಆಸ್ಟಿನ್ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News