ಕೆನಡಾ | ಹಿಂದು ಅರ್ಚಕರ ಅಮಾನತು
ಒಟ್ಟಾವ : ಕೆನಡಾದ ಬ್ರಾಂಪ್ಟನ್ ನಲ್ಲಿನ ಹಿಂದು ದೇವಸ್ಥಾನದಲ್ಲಿ ನವೆಂಬರ್ 3ರಂದು ನಡೆದ ಘರ್ಷಣೆಯ ಸಂದರ್ಭ `ಹಿಂಸಾತ್ಮಕ ಸಂದೇಶ' ಹರಡುವಲ್ಲಿ ತೊಡಗಿಸಿಕೊಂಡಿದ್ದ ಆರೋಪದಲ್ಲಿ ದೇವಸ್ಥಾನದ ಅರ್ಚಕರನ್ನು ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ.
ದೇವಸ್ಥಾನದಲ್ಲಿ ಭಾರತೀಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದಿದ್ದ ಕಾನ್ಸುಲರ್ ಕಾರ್ಯಕ್ರಮದ(ಆತಿಥೇಯ ದೇಶ ಮತ್ತು ರಾಯಭಾರ ಕಚೇರಿ ಪ್ರತಿನಿಧಿಸುವ ದೇಶಗಳ ನಡುವೆ ಸಾಂಸ್ಕøತಿಕ ವಿನಿಮಯ ಮತ್ತು ತಿಳುವಳಿಕೆಯನ್ನು ಉತ್ತೇಜಿಸಲು ಆಯೋಜಿಸುವ ಕಾರ್ಯಕ್ರಮ) ಸಂದರ್ಭ ಖಾಲಿಸ್ತಾನ್ ಪರ ಗುಂಪು ದಾಂಧಲೆ ನಡೆಸಿತ್ತು.
`ಈ ಘಟನೆಗೆ ಸಂಬಂಧಿಸಿ ಹಿಂಸಾತ್ಮಕ ಸಂದೇಶ ಹರಡುವುದರಲ್ಲಿ ತೊಡಗಿಸಿಕೊಂಡಿದ್ದ ದೇವಸ್ಥಾನದ ಅರ್ಚಕರನ್ನು ಹಿಂದು ಸಭಾ ಮಂದಿರದ ಅಧ್ಯಕ್ಷ ಮಧುಸೂದನ್ ಲಾಮ ಅಮಾನತುಗೊಳಿಸಿದ್ದಾರೆ. ಬಹು ಸಂಖ್ಯೆಯ ಸಿಖ್ ಕೆನಡಿಯನ್ನರು ಹಾಗೂ ಹಿಂದು ಕೆನಡಿಯನ್ನರು ಸೌಹಾರ್ದತೆಯಿಂದ ಬದುಕಲು ಬಯಸುತ್ತಾರೆ ಮತ್ತು ಹಿಂಸೆಯನ್ನಯ ಸಹಿಸುವುದಿಲ್ಲ ಎಂದು ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.