ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಶೆನ್ನಿಸ್ ಪಲಾಸಿಯೋಸ್

ಚಂಡೀಗಢ ಮೂಲದ ಶ್ವೇತಾ ಶಾರದಾ ಮಿಸ್ ಯೂನಿವರ್ಸ್ 2023 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರು ಅಗ್ರ 20ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಗ್ರ 10ರಲ್ಲಿ ಸ್ಥಾನ ಪಡೆಯಲು ಅವರು ವಿಫಲರಾದರು

Update: 2023-11-19 05:39 GMT

Photo :x/@MissUniverse

ನ್ಯೂಯಾರ್ಕ್: ನಿಕರಾಗುವಾ ದೇಶದ ಶೆನ್ನಿಸ್ ಪಲಾಸಿಯೋಸ್ ಅವರು ಮಿಸ್ ಯೂನಿವರ್ಸ್ 2023 ಆಗಿ ಆಯ್ಕೆಯಾಗಿದ್ದಾರೆ. ಎಲ್ ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫೊ ಪಿನೆಡಾ ಅರೆನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು indiatoday.in ವರದಿ ಮಾಡಿದೆ.

ಮಿಸ್ ಯೂನಿವರ್ಸ್ 2022 - USA ಯ ಆರ್ ಬೊನ್ನಿ ಗೇಬ್ರಿಯಲ್ ಅವರು ಶೆನ್ನಿಸ್ ಪಲಾಸಿಯೋಸ್ ಅವರಿಗೆ ಕಿರೀಟ ತೊಡಿಸಿದರು. ಮಿಸ್ ಯೂನಿವರ್ಸ್ ಗೆದ್ದ ಮೊದಲ ನಿಕರಾಗುವಾ ಮಹಿಳೆ ಎಂಬ ಹೆಗ್ಗಳಿಕೆಗೆ ಶೆನ್ನಿಸ್ ಪಲಾಸಿಯೋಸ್ ಪಾತ್ರರಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ ಎರಡನೇ ರನ್ನರ್ ಅಪ್ ಆಗಿದ್ದರೆ, ಥಾಯ್ಲೆಂಡ್‌ನ ಆಂಟೋನಿಯಾ ಪೋರ್ಸಿಲ್ಡ್ ಮೊದಲ ರನ್ನರ್ ಅಪ್ ಕಿರೀಟವನ್ನು ಪಡೆದರು.

ಈ ವರ್ಷ, ಚಂಡೀಗಢ ಮೂಲದ ಶ್ವೇತಾ ಶಾರದಾ ಮಿಸ್ ಯೂನಿವರ್ಸ್ 2023 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರು ಅಗ್ರ 20ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಗ್ರ 10ರಲ್ಲಿ ಸ್ಥಾನ ಪಡೆಯಲು ಅವರು ವಿಫಲರಾದರು. ಈ ವರ್ಷ, ಪಾಕಿಸ್ತಾನವು ಮೊದಲ ಬಾರಿಗೆ ಮಿಸ್ ಯೂನಿವರ್ಸ್‌ನಲ್ಲಿ ಭಾಗವಹಿಸಿತ್ತು. ಈ ವರ್ಷ ನಡೆದ 72ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 84 ದೇಶಗಳು ಮತ್ತು ಪ್ರಾಂತ್ಯಗಳ ಸ್ಪರ್ಧಿಗಳು ಸ್ಪರ್ಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News