ಗಾಝಾದಿಂದ 100ಕ್ಕೂ ಹೆಚ್ಚು ರೋಗಿಗಳ ಸ್ಥಳಾಂತರ : ವಿಶ್ವ ಆರೋಗ್ಯ ಸಂಸ್ಥೆ
Update: 2024-11-05 16:58 GMT
ಜಿನೆವಾ : ಗಂಭೀರ ಗಾಯ ಹಾಗೂ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ರೋಗಿಗಳನ್ನು ಯುದ್ಧದಿಂದ ಧ್ವಂಸಗೊಂಡಿರುವ ಗಾಝಾದಿಂದ ಬುಧವಾರ ಸ್ಥಳಾಂತರಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಇವು ತಾತ್ಕಾಲಿಕ ಕ್ರಮಗಳಾಗಿವೆ. ಗಾಝಾದಿಂದ ಹೊರಗೆ ರೋಗಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ದೀರ್ಘಕಾಲ ಮುಂದುವರಿಯಬೇಕು ಎಂಬುದು ನಮ್ಮ ಆಶಯವಾಗಿದೆ. ಶಲೋಮ್ ಗಡಿದಾಟು ಮೂಲಕ ರೋಗಿಗಳು ದೊಡ್ಡ ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಾರೆ. ಕೆಲವರನ್ನು ವಿಮಾನದ ಮೂಲಕ ಯುಎಇಗೆ, ಉಳಿದವರನ್ನು ರೊಮಾನಿಯಾಕ್ಕೆ ಸ್ಥಳಾಂತರಿಸಲಾಗುವುದು. ಸುಮಾರು 12,000 ರೋಗಿಗಳು ಸ್ಥಳಾಂತರಕ್ಕೆ ಕಾಯುತ್ತಿದ್ದಾರೆ ಎಂದು ಆಕ್ರಮಿತ ಫೆಲೆಸ್ತೀನ್ ಪ್ರಾಂತಕ್ಕೆ ವಿಶ್ವಸಂಸ್ಥೆ ಪ್ರತಿನಿಧಿ ರಿಕ್ ಪೀಪರ್ಕಾನ್ ಹೇಳಿದ್ದಾರೆ.