ಮ್ಯಾನ್ಮಾರ್: ತುರ್ತು ಪರಿಸ್ಥಿತಿ 6 ತಿಂಗಳು ವಿಸ್ತರಣೆ

Update: 2025-01-31 21:53 IST
ಮ್ಯಾನ್ಮಾರ್: ತುರ್ತು ಪರಿಸ್ಥಿತಿ 6 ತಿಂಗಳು ವಿಸ್ತರಣೆ

ಸಾಂದರ್ಭಿಕ ಚಿತ್ರ | Photo: NDTV 

  • whatsapp icon

ಯಾಂಗಾನ್: ಮ್ಯಾನ್ಮಾರ್‍ ನ ಸೇನಾಡಳಿತವು ದೇಶದಲ್ಲಿ ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ಮತ್ತೆ 6 ತಿಂಗಳಿಗೆ ವಿಸ್ತರಿಸಿದೆ ಎಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಅವರ ನೇತೃತ್ವದ ಪ್ರಜಾಸತ್ತಾತ್ಮಕ ಸರಕಾರವನ್ನು ಪದಚ್ಯುತಗೊಳಿಸಿ ಆಡಳಿತ ವಶಪಡಿಸಿಕೊಂಡ ದಂಗೆಯ 4ನೇ ವಾರ್ಷಿಕ ದಿನದ ಮುನ್ನಾದಿನ ಸೇನಾಡಳಿತ ಈ ಕ್ರಮ ಕೈಗೊಂಡಿದೆ. ಈ ವರ್ಷ ಸಾರ್ವತ್ರಿಕ ಚುನಾವಣೆ ನಡೆಸಲಾಗುವುದು. ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು, ವಿಶೇಷವಾಗಿ ಸ್ವತಂತ್ರ ಮತ್ತು ನ್ಯಾಯಸಮ್ಮತವಾಗಿ ನಡೆಸಲು, ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಗೊಳಿಸಲು ಇನ್ನೂ ಬಹಳಷ್ಟು ಕೆಲಸ ಮಾಡಬೇಕಿದೆ. ಆದ್ದರಿಂದ ತುರ್ತು ಪರಿಸ್ಥಿತಿಯನ್ನು ಅನಿವಾರ್ಯವಾಗಿ 6 ತಿಂಗಳು ವಿಸ್ತರಿಸಲಾಗಿದೆ ಎಂದು ಸೇನಾಡಳಿತ ಘೋಷಿಸಿದೆ.

ಆದರೆ ಚುನಾವಣೆಯ ನೆಪದಲ್ಲಿ ತನ್ನ ಕೈಗೊಂಬೆ ಸರಕಾರವನ್ನು ಸ್ಥಾಪಿಸಲು ಸೇನಾಡಳಿತ ಯೋಜನೆ ರೂಪಿಸಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಚುನಾವಣೆಗೆ ದಿನಾಂಕವನ್ನು ಸೇನಾಡಳಿತ ಘೋಷಿಸಿಲ್ಲ. ಸೇನಾಡಳಿತ ನಡೆಸುವ ಚುನಾವಣೆ ಜನರ ಇಚ್ಛೆಗೆ ವಿರುದ್ಧವಾಗಿ ನಡೆಯುವುದರಿಂದ ಅದರ ಫಲಿತಾಂಶವನ್ನು ಮಾನ್ಯ ಮಾಡದಂತೆ ವಿರೋಧ ಪಕ್ಷಗಳು ಅಂತರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News