ಅಮೆರಿಕಾದಲ್ಲಿ ಶ್ವಾನಗಳಿಗೆ ನಿಗೂಢ ಶ್ವಾಸಕೋಶದ ಕಾಯಿಲೆ

Update: 2023-11-30 13:38 GMT

ವಾಷಿಂಗ್ಟನ್: ಅಮೆರಿಕಾದ ಕನಿಷ್ಠ 14 ರಾಜ್ಯಗಳಲ್ಲಿ ಶ್ವಾನಗಳಲ್ಲಿ ನಿಗೂಡ ಶ್ವಾಸಕೋಶದ ಕಾಯಿಲೆ ಹರಡುತ್ತಿದೆ ಎಂದು ಅಮೆರಿಕನ್‌ ವೆಟರಿನರಿ ಮೆಡಿಕಲ್‌ ಅಸೋಸಿಯೇಷನ್‌ ಹೇಳಿದೆ.

ಮಾರಣಾಂತಿಕವಾಗಬಹುದಾದ ಈ ಕಾಯಿಲೆಯು ವೈರಲ್‌ ಅಥವಾ ಬ್ಯಾಕ್ಟೀರಿಯಲ್‌ ಸೋಂಕಿನಿಂದ ಹರಡುತ್ತಿದೆಯೇ ಅಥವಾ “ಕೆನ್ನಲ್‌ ಕಫ್”‌ ಎಂಬ ಶ್ವಾನಗಳ ರೋಗ ಇದಾಗಿದೆಯೇ ಎಂದು ತಿಳಿಯಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.

ಈ ರೋಗ ಬಾಧಿತ ನಾಯಿಗಳು ನಾಲ್ಕರಿಂದ ಆರು ವಾರಗಳ ಕಾಲ ಕೆಮ್ಮುತ್ತವೆ. ಇದು ಸಾಮಾನ್ಯ ಬ್ರಾಂಕೈಟಿಸ್‌ನಿಂದ ಆರಂಭಗೊಂಡು ನ್ಯುಮೋನಿಯಾ ಆಗುವ ಸಾಧ್ಯತೆಯಿದೆ. ಈ ಕಾಯಿಲೆ ಶ್ವಾನಗಳಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದು ತಿಳಿಯಲಾಗಿದೆಯಾದರೂ ಈ ರಜಾಕಾಲದಲ್ಲಿ ಶ್ವಾನ ಮಾಲಕರು ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ವೈದ್ಯರು ಹೇಳುತ್ತಾರೆ.

ಓರೆಗಾಂವ್‌ನಲ್ಲಿ 200 ಪ್ರಕರಣಗಳು ವರದಿಯಾಗಿದ್ದರೆ ಕ್ಯಾಲಿಫೋರ್ನಿಯಾ, ಕೊಲರಾಡೊ, ಫ್ಲೋರಿಡಾ, ಜಾರ್ಜಿಯಾ, ಇಲ್ಲಿನೋಯಿಸ್‌, ಇಂಡಿಯಾನ, ಮಸಾಚುಸೆಟ್ಸ್‌, ನ್ಯೂ ಹ್ಯಾಂಪ್‌ಶೈರ್‌, ವಾಷಿಂಗ್ಟನ್‌ ಮುಂತಾದೆಡೆ ಕೂಡ ಸಾಕಷ್ಟು ಪ್ರಕರಣಗಳು ವರದಿಯಾಗಿವೆ.

ಶ್ವಾನಗಳಿಗೆ ನೀಡಲಾಗುವ ಎಲ್ಲಾ ಲಸಿಕೆಗಳನ್ನು ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಹಾಗೂ ಕಾಯಿಲೆಯ ಲಕ್ಷಣ ಕಂಡಾಕ್ಷಣ ನಾಯಿಗಳನ್ನು ವೈದ್ಯರಲ್ಲಿಗೆ ಒಯ್ಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News