ನೆಟ್ವರ್ಕ್ ವೈಫಲ್ಯ; ಬ್ರಿಟನ್ ನಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತ

Update: 2023-08-28 17:25 GMT

ಸಾಂದರ್ಭಿಕ ಚಿತ್ರ | Photo: PTI

 ಲಂಡನ್: ಬ್ರಿಟನ್ನಲ್ಲಿ ತಾಂತ್ರಿಕ ದೋಷದ ಕಾರಣ ನೆಟ್ವರ್ಕ್ ಸಮಸ್ಯೆ ತಲೆದೋರಿದ್ದು ದೇಶದಾದ್ಯಂತ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.

ಏರ್ಟ್ರಾಫಿಕ್ ಕಂಟ್ರೋಲ್ ನೆಟ್ವರ್ಕ್ ವೈಫಲ್ಯದಿಂದಾಗಿ ವಿಮಾನ ಸಂಚಾರ ವಿಳಂಬವಾಗಲಿದೆ ಎಂದು ವಿಮಾನ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ. `ನಾವು ಪ್ರಸ್ತುತ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಂಚಾರ ವ್ಯವಸ್ಥೆಯ ನಿರ್ಬಂಧಗಳನ್ನು ಅನ್ವಯಿಸಿದ್ದೇವೆ.

ಇಂಜಿನಿಯರ್ಗಳು ದೋಷ ಪತ್ತೆಹಚ್ಚಿ ಸರಿಪಡಿಸುವ ಕಾರ್ಯ ನಡೆಸುತ್ತಿದ್ದಾರೆ' ಎಂದು ರಾಷ್ಟ್ರೀಯ ವಾಯುಸಂಚಾರ ನಿಯಂತ್ರಕರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News