ಮನುಷ್ಯನಂತೆಯೇ ಪರ್ವತಕ್ಕೂ ಕಾನೂನು ಹಕ್ಕುಗಳನ್ನು ನೀಡಿದ ನ್ಯೂಝಿಲ್ಯಾಂಡ್

Update: 2025-01-31 22:01 IST
ಮನುಷ್ಯನಂತೆಯೇ ಪರ್ವತಕ್ಕೂ ಕಾನೂನು ಹಕ್ಕುಗಳನ್ನು ನೀಡಿದ ನ್ಯೂಝಿಲ್ಯಾಂಡ್

ಸಾಂದರ್ಭಿಕ ಚಿತ್ರ

  • whatsapp icon

ವೆಲ್ಲಿಂಗ್ಟನ್: ಮಹತ್ವದ ನಿರ್ಧಾರವೊಂದರಲ್ಲಿ ನ್ಯೂಝಿಲ್ಯಾಂಡ್ ಸರಕಾರ ಮೌಂಟ್ ತಾರಾನಕಿ(ತಾರಾನಕಿ ಪರ್ವತ)ಗೆ ಮನುಷ್ಯರಂತೆಯೇ ಕಾನೂನು ಹಕ್ಕುಗಳನ್ನು ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಈ ಪರ್ವತವನ್ನು ಇನ್ನು ಅಧಿಕೃತವಾಗಿ ತಾರಾನಕಿ ಮೌಂಗಾ ಎಂದು ಕರೆಯಲಾಗುತ್ತದೆ. ವಂಗನುಯಿ ನದಿ ಮತ್ತು ಟೆ ಉರೆವೆರಾ ರಾಷ್ಟ್ರೀಯ ಉದ್ಯಾನವನದ ಬಳಿಕ ವೈಯಕ್ತಿಕ ಸ್ಥಾನಮಾನವನ್ನು ಪಡೆದ ಮೂರನೇ ಪ್ರಾಕೃತಿಕ ಸಂಪತ್ತು ಆಗಿ ತಾರಾನಕಿ ಪರ್ವತ ಗುರುತಿಸಿಕೊಂಡಿದೆ.

ಇದರಿಂದಾಗಿ ಈ ಪರ್ವತವು ಸ್ಥಳೀಯ ಬುಡಕಟ್ಟು ಸಮುದಾಯ `ಐವಿ'ಯ ಪ್ರತಿನಿಧಿಯ ಸ್ಥಾನಮಾನ ಪಡೆಯಲಿದೆ. ಈ ಪರ್ವತವನ್ನು `ಐವಿ' ಸ್ಥಳೀಯ ಬುಡಕಟ್ಟು ಸಮುದಾಯದವರು ಪೂರ್ವಜರ ಗುರುತಾಗಿ ಪರಿಗಣಿಸುತ್ತಾರೆ. ವಸಾಹತುಶಾಹಿ ಸಮಯದಲ್ಲಿ ನಡೆದಿದ್ದ ವ್ಯಾಪಕ ಭೂಮಿ ಮುಟ್ಟುಗೋಲು ಪ್ರಕ್ರಿಯೆಯಲ್ಲಿ ಸ್ಥಳೀಯ ಬುಡಕಟ್ಟು ಸಮುದಾಯದವರಿಗೆ ಆಗಿರುವ ಅನ್ಯಾಯವನ್ನು ಸರಿದೂಗಿಸುವ ಗುರಿ ಹೊಂದಲಾಗಿದೆ. ಹಿಂದಿನ ತಪ್ಪುಗಳಿಂದ ಉಂಟಾದ ನೋವುಗಳನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಸ್ಥಳೀಯ ಬುಡಕಟ್ಟು ಸಮುದಾಯದವರ ಆಕಾಂಕ್ಷೆಗಳನ್ನು ಬೆಂಬಲಿಸಬೇಕು' ಎಂದು ಸಚಿವ ಪೌಲ್ ಗೋಲ್ಡ್‍ಸ್ಮಿತ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News