ಬೈರೂತ್ ಹೊರವಲಯದ ಮೇಲೆ ಇಸ್ರೇಲ್ ವೈಮಾನಿಕ ದಾಳಿ
Update: 2025-03-28 21:52 IST

ಸಾಂದರ್ಭಿಕ ಚಿತ್ರ | Photo: NDTV
ಬೈರೂತ್: ಲೆಬನಾನ್ ರಾಜಧಾನಿ ಬೈರೂತ್ನ ದಕ್ಷಿಣ ಹೊರವಲಯದ ಮೇಲೆ ಶುಕ್ರವಾರ ಇಸ್ರೇಲ್ ವಾಯುಪಡೆ ಬೃಹತ್ ವೈಮಾನಿಕ ದಾಳಿ ನಡೆಸಿದ್ದು ಇದು ನವೆಂಬರ್ನಲ್ಲಿ ಕದನ ವಿರಾಮ ಜಾರಿಗೆ ಬಂದ ಬಳಿಕ ಈ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ಪ್ರಥಮ ಬಾಂಬ್ ದಾಳಿಯಾಗಿದ್ದು ಹಲವು ಕಟ್ಟಡಗಳಿಗೆ ಹಾನಿಯಾಗಿರುವುದಾಗಿ ವರದಿಯಾಗಿದೆ.
ಹಿಜ್ಬುಲ್ಲಾ ಗುಂಪಿಗೆ ಸೇರಿದ ಡ್ರೋನ್ ದಾಸ್ತಾನು ವ್ಯವಸ್ಥೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.