ಬ್ಯಾಂಕಾಕ್: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
Update: 2025-03-29 20:43 IST

PC - X
ಬ್ಯಾಂಕಾಕ್: ಥೈಲ್ಯಾಂಡ್ ನ ಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪ ಹಾಗೂ ಆ ಬಳಿಕದ ಸರಣಿ ಪಶ್ಚಾತ್ ಕಂಪನಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗಳನ್ನು ತೆರವುಗೊಳಿಸಿದ ಬಳಿಕ ಮಹಿಳೆಯೊಬ್ಬರು ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿರುವುದಾಗಿ ವರದಿಯಾಗಿದೆ.
ತೀವ್ರ ಭೂಕಂಪದ ಹಿನ್ನೆಲೆಯಲ್ಲಿ ಬಿಎನ್ಎಚ್ ಆಸ್ಪತ್ರೆ ಹಾಗೂ ಕಿಂಗ್ ಚುಲಲೊಂಗ್ಕಾರ್ನ್ ಸ್ಮಾರಕ ಆಸ್ಪತ್ರೆಯ ಸಿಬ್ಬಂದಿಗಳನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಸುತ್ತುವರಿದಿದ್ದು ಬ್ಯಾಂಕಾಕ್ ನ ರಸ್ತೆಯಲ್ಲಿ ಸ್ಟ್ರೆಚರ್ ನಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿ ಹೇಳಿದೆ.
Footage during the earthquake in #Bangkok a baby was born in the park Waht a story to tell ‘’ I was born during the earthquake ‘’ #แผ่นดินไหว #earthquake #myanmarearthquake #bangkokearthquake #ตึกถล่ม pic.twitter.com/7E0FdzfPEf
— Miia (@i30199) March 28, 2025