ಜಾಗತಿಕ ಶ್ರೀಮಂತ ಮಹಿಳೆಯರ ಪಟ್ಟಿ: ರೋಶ್ನಿ ಮಲ್ಹೋತ್ರಗೆ 5ನೇ ಸ್ಥಾನ
Update: 2025-03-28 20:47 IST

PC | X/@RoshniNadarHCL
ಲಂಡನ್, ಮಾ.28: ಹುರುನ್ ಜಾಗತಿಕ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಎಚ್‍ಸಿಎಲ್ ಟೆಕ್ನಾಲಜೀಸ್‍ನ ಅಧ್ಯಕ್ಷೆ ರೋಶ್ನಿ ನಡಾರ್ ಮಲ್ಹೋತ್ರ ಅವರು 5ನೇ ಸ್ಥಾನ ಪಡೆಯುವ ಮೂಲಕ ವಿಶ್ವದಲ್ಲಿ ಅತೀ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ಪ್ರಪ್ರಥಮ ಭಾರತೀಯರೆಂಬ ದಾಖಲೆ ಬರೆದಿದ್ದಾರೆ. ರೋಶ್ನಿ ಮಲ್ಹೋತ್ರ ಅವರು 3.5 ಲಕ್ಷ ಕೋಟಿ ರೂ. ನಿವ್ವಳ ಸಂಪತ್ತು ಹೊಂದಿದ್ದಾರೆ.
ವಾಲ್‍ಮಾರ್ಟ್‍ನ ಆಲಿಸ್ ವಾಲ್ಟನ್ ವಿಶ್ವದ ಅತೀ ಶ್ರೀಮಂತ ಮಹಿಳೆ ಎನಿಸಿಕೊಂಡರೆ, ಲಾ'ರಿಯಲ್‍ನ ಫ್ರಾಂಕೋಯಿಸ್ ಬೆಟೆನ್‍ಕೋರ್ಟ್ ಮೇಯರ್ಸ್ ಎರಡನೇ ಸ್ಥಾನದಲ್ಲಿದ್ದಾರೆ.