ಗಡಿ ಗುರುತಿಸುವಿಕೆ: ಲೆಬನಾನ್-ಸಿರಿಯಾ ಒಪ್ಪಂದ

Update: 2025-03-28 20:14 IST
ಗಡಿ ಗುರುತಿಸುವಿಕೆ: ಲೆಬನಾನ್-ಸಿರಿಯಾ ಒಪ್ಪಂದ

Photo Credit | X

  • whatsapp icon

ಬೈರೂತ್, ಮಾ.28: ಎರಡೂ ದೇಶಗಳ ನಡುವಿನ ಗಡಿಯನ್ನು ಸ್ಪಷ್ಟವಾಗಿ ಗುರುತಿಸಲು ಹಾಗೂ ಗಡಿಯುದ್ದಕ್ಕೂ ಉದ್ವಿಗ್ನತೆಯನ್ನು ಕಡಿಮೆಗೊಳಿಸಿ ಉಭಯ ದೇಶಗಳ ನಡುವೆ ಸಮನ್ವಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಪ್ಪಂದವೊಂದಕ್ಕೆ ಲೆಬನಾನ್ ಮತ್ತು ಸಿರಿಯಾ ಸಹಿ ಹಾಕಿವೆ ಎಂದು ಸೌದಿ ಪ್ರೆಸ್ ಏಜೆನ್ಸಿ ಶುಕ್ರವಾರ ವರದಿ ಮಾಡಿದೆ.

ಸೌದಿ ಅರೆಬಿಯಾದಲ್ಲಿ ಗುರುವಾರ ತಡರಾತ್ರಿ ಲೆಬನಾನ್‍ನ ರಕ್ಷಣಾ ಸಚಿವ ಮೈಕೆಲ್ ಮೆನಾಸ್ಸ ಮತ್ತು ಸಿರಿಯಾದ ರಕ್ಷಣಾ ಸಚಿವ ಮುರ್ಹಫ್ ಅಬು ಖಸ್ರ ಅವರು ಸೌದಿ ರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ತಿಂಗಳ ಆರಂಭದಲ್ಲಿ ಗಡಿಭಾಗದಲ್ಲಿ ನಡೆದ ಘರ್ಷಣೆಯಲ್ಲಿ ಎರಡೂ ದೇಶಗಳ ಹಲವರು ಸಾವನ್ನಪ್ಪಿದ್ದರು ಮತ್ತು ಗಾಯಗೊಂಡಿದ್ದರು.

ಗಡಿಯನ್ನು ಗುರುತಿಸುವ ಪ್ರಾಮುಖ್ಯತೆಯನ್ನು ಒಪ್ಪಿಕೊಳ್ಳುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಾನೂನು ಮತ್ತು ವಿಶೇಷ ಸಮಿತಿಗಳ ರಚನೆಗೆ ಸಮ್ಮತಿಸುವ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News