ಪಾಕ್: ಮಕ್ಕಳಿಗೆ ಪೋಲಿಯೊ ಲಸಿಕೆ ನಿರಾಕರಿಸುವ ಪಾಲಕರಿಗೆ ಜೈಲು
Update: 2023-09-06 18:04 GMT
ಇಸ್ಲಮಾಬಾದ್: ತಮ್ಮ ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ನಿರಾಕರಿಸುವ ಪಾಲಕರಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಹೊಸ ಕಾನೂನನ್ನು ಸಿಂಧ್ ಪ್ರಾಂತದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಪಾಕಿಸ್ತಾನದಲ್ಲಿ ಸಾಂಕ್ರಾಮಿಕವಾಗಿರುವ ಪೋಲಿಯೊವನ್ನು ನಿರ್ಮೂಲನೆ ಮಾಡುವ ಪ್ರಯತ್ನವಾಗಿ ಸಿಂಧ್ ಪ್ರಾಂತದಲ್ಲಿ ಹೊಸ ಕಾನೂನನ್ನು ಜಾರಿಗೊಳಿಸಲಾಗಿದೆ. ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವುದನ್ನು ನಿರಾಕರಿಸುವ ಪಾಲಕರಿಗೆ 1 ತಿಂಗಳ ಜೈಲುಶಿಕ್ಷೆ, 50,000 ಪಾಕಿಸ್ತಾನಿ ರೂ.(ಭಾರತದ 13,487 ರೂ.) ದಂಡ ವಿಧಿಸಲಾಗುವುದು. ಕಳೆದ ವಾರ ಈ ಕಾನೂನಿಗೆ ಸಹಿ ಬಿದ್ದಿದ್ದು ಈ ತಿಂಗಳಿಂದ ಕಾನೂನು ಜಾರಿಗೆ ಬರಲಿದೆ ಎಂದು `ದಿ ಗಾರ್ಡಿಯನ್' ವರದಿ ಮಾಡಿದೆ.