ಪಾಕಿಸ್ತಾನ | ಉಗ್ರರ ದಾಳಿಯಲ್ಲಿ 8 ಭದ್ರತಾ ಸಿಬ್ಬಂದಿ ಸಾವು
Update: 2024-07-16 15:01 GMT
ಇಸ್ಲಾಮಾಬಾದ್ : ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 8 ಭದ್ರತಾ ಸಿಬ್ಬಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಬನ್ನೂ ಸೇನಾನೆಲೆ ಉತ್ತರ ವಝಿರಿಸ್ತಾನ್ನ ಲ್ಲಿ ಅಫ್ಘಾನಿಸ್ತಾನದ ಗಡಿಭಾಗದ ಸಮೀಪದಲ್ಲಿದೆ. ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಕಗಳು ತುಂಬಿದ್ದ ವಾಹನವನ್ನು ಸೇನಾನೆಲೆಯ ಕಂಪೌಂಡ್ಗೆ ಅಪ್ಪಳಿಸಿದಾಗ ನಡೆದ ಸ್ಫೋಟದಲ್ಲಿ ಕನಿಷ್ಠ 8 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಬಳಿಕ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 10 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನದ ಸೇನಾಧಿಕಾರಿಗಳು ಹೇಳಿದ್ದಾರೆ.