ಜರ್ಮನಿಯಲ್ಲಿ ಪಾಕಿಸ್ತಾನದ ಕಾನ್ಸುಲೇಟ್ ಮೇಲೆ ದಾಳಿ
Update: 2024-07-21 16:53 GMT
ಬರ್ಲಿನ್ : ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿರುವ ಪಾಕಿಸ್ತಾನದ ಕಾನ್ಸುಲೇಟ್ ಕಚೇರಿಯ ಮೇಲೆ ಜನರ ಗುಂಪೊಂದು ದಾಳಿ ನಡೆಸಿ ಕಚೇರಿಯ ಕಟ್ಟಡದಲ್ಲಿದ್ದ ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿದ ಘಟನೆ ವರದಿಯಾಗಿದೆ.
ಅಫ್ಘಾನಿಸ್ತಾನದ ಧ್ವಜವನ್ನು ಬೀಸುತ್ತಿದ್ದ ಕೆಲವು ಪ್ರತಿಭಟನಾಕಾರರು ಪಾಕಿಸ್ತಾನದ ಕಾನ್ಸುಲೇಟ್ನತ್ತ ಕಲ್ಲೆಸೆದ ಬಳಿಕ ಕಚೇರಿಯ ಒಳಗೆ ಪ್ರವೇಶಿಸುವ, ಕಟ್ಟಡದಲ್ಲಿದ್ದ ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ, ಅಲ್ಲಿ ಅಫ್ಘಾನಿಸ್ತಾನದ ಧ್ವಜವನ್ನು ಇರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪ್ರತಿಭಟನಾಕಾರರು ಪಾಕಿಸ್ತಾನದ ಧ್ವಜವನ್ನು ಸುಡಲು ಪ್ರಯತ್ನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಘಟನೆಯನ್ನು ಖಂಡಿಸಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜರ್ಮನಿ ಸರಕಾರವನ್ನು ಆಗ್ರಹಿಸಿದೆ.