ಉದ್ವಿಗ್ನತೆ ಕಡಿಮೆಗೊಳಿಸಲು ಪಾಕ್, ಇರಾನ್ ಒಪ್ಪಿಗೆ
Update: 2024-01-20 17:55 GMT
ಇಸ್ಲಮಾಬಾದ್: ಗಡಿ ಪ್ರದೇಶದ ಬಲೂಚಿಸ್ತಾನ ಪ್ರಾಂತದಲ್ಲಿ ಸರಣಿ ಮಿಲಿಟರಿ ಕ್ರಮಗಳಿಂದ ಉಲ್ಬಣಗೊಂಡ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಇರಾನ್ ಮತ್ತು ಪಾಕಿಸ್ತಾನ ಶುಕ್ರವಾರ ಸಮ್ಮತಿಸಿವೆ.
ಶುಕ್ರವಾರ ಪಾಕ್ ಪ್ರಧಾನಿ ಅನ್ವರ್-ಉಲ್ ಹಕ್ ಕಾಕರ್ ಮಿಲಿಟರಿ ಮತ್ತು ಗುಪ್ತಚರ ಇಲಾಖೆಯ ಮುಖ್ಯಸ್ಥರೊಂದಿಗೆ ತುರ್ತು ಭದ್ರತಾ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಭಯೋತ್ಪಾದನೆ ನಿಗ್ರಹ ಮತ್ತು ಪರಸ್ಪರ ಕಾಳಜಿಯ ಇತರ ಅಂಶಗಳ ಬಗ್ಗೆ ಕಾರ್ಯಮಟ್ಟದ ಸಹಕಾರ ಮತ್ತು ನಿಕಟ ಸಮನ್ವಯವನ್ನು ಬಲಪಡಿಸುವ ಬಗ್ಗೆ, ಉಭಯ ದೇಶಗಳ ರಾಯಭಾರಿಗಳು ಮತ್ತೆ ತಮ್ಮ ಕಾರ್ಯನಿರ್ವಹಣೆಯ ಪ್ರದೇಶಕ್ಕೆ ಮರಳುವ ಬಗ್ಗೆಯೂ ಇರಾನ್-ಪಾಕ್ ಅಧಿಕಾರಿಗಳ ನಡುವೆ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ಹೇಳಿವೆ.