ಪಾನ್ ಸವಿಯಲು ಕಾಶಿಗೆ ಬನ್ನಿ: ಹೂಡಿಕೆದಾರರಿಗೆ ಪ್ರಧಾನಿ ಮೋದಿ ಆಹ್ವಾನ

Update: 2024-09-05 15:53 GMT

PC : X/@narendramodi

ಸಿಂಗಾಪುರ: ಪಾನ್‍ನ ಸ್ವಾದವನ್ನು ಸವಿಯಲು ಬಯಸುವಿರಾದರೆ ಕಾಶಿ(ವಾರಣಾಸಿ)ಗೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ.

ಸಿಂಗಾಪುರದಲ್ಲಿ ಉದ್ಯಮಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು `ಭಾರತದಲ್ಲಿ ಪಾನ್ ಬಗ್ಗೆ ನಡೆಯುವ ಚರ್ಚೆ ವಾರಣಾಸಿಯ ವಿನಹ ಅಪೂರ್ಣವಾಗುತ್ತದೆ. ನಾನು ಆ ಕ್ಷೇತ್ರದ ಸಂಸದ. ನಿಮಗೆ ಪಾನ್‍ನ ಸ್ವಾದವನ್ನು ಸವಿಯಬೇಕಿದ್ದರೆ ನೀವು ಕಾಶಿಯಲ್ಲಿ ಹೂಡಿಕೆ ಮಾಡಬೇಕು' ಎಂದರು.

ಹೂಡಿಕೆಯನ್ನು ಉತ್ತೇಜಿಸಲು `ಭಾರತದಲ್ಲಿ ಹೂಡಿಕೆ' ಕಚೇರಿಗಳನ್ನು ವಿದೇಶಗಳಲ್ಲಿ ತೆರೆಯಲಾಗುವುದು. ಒಂದು ಕಚೇರಿ ಸಿಂಗಾಪುರದಲ್ಲೂ ಕಾರ್ಯಾರಂಭ ಮಾಡಲಿದೆ. ಇದು ಸಿಂಗಾಪುರದ ಹೂಡಿಕೆದಾರರಿಗೆ ವಿವಿಧ ಕ್ಷೇತ್ರಗಳಲ್ಲಿ ಮಾಹಿತಿ ನೀಡುವ ಕೇಂದ್ರವಾಗಲಿದೆ ಎಂದು ಮೋದಿ ಹೇಳಿದ್ದಾರೆ. ಸಿಂಗಾಪುರದ ವ್ಯಾಪಾರ ಮುಖಂಡರು ಮತ್ತು ಸಿಇಒಗಳನ್ನು ಭೇಟಿ ಮಾಡಿದ ಮೋದಿ ಹೂಡಿಕೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ಭಾರತದಲ್ಲಿ ನಡೆಯುತ್ತಿರುವ ಸುಧಾರಣೆಗಳನ್ನು ವಿವರಿಸಿದರು ಎಂದು ವಿದೇಶಾಂಗ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News