ಪೋಪ್ ಫ್ರಾನ್ಸಿಸ್ ದೇಹಸ್ಥಿತಿ ಉಲ್ಬಣ; ಉಸಿರಾಟದ ತೊಂದರೆ

Update: 2025-03-01 08:30 IST
ಪೋಪ್ ಫ್ರಾನ್ಸಿಸ್ ದೇಹಸ್ಥಿತಿ ಉಲ್ಬಣ; ಉಸಿರಾಟದ ತೊಂದರೆ

PC: x.com/resolution1441

  • whatsapp icon

ರೋಮ್: ನ್ಯುಮೋನಿಯಾದಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅವರ ದೇಹಸ್ಥಿತಿ ಶುಕ್ರವಾರ ಮತ್ತಷ್ಟು ವಿಷಮಿಸಿದ್ದು, ಉಸಿರಾಟದ ತೊಂದರೆ ತೀವ್ರವಾಗಿದೆ. ಇದು ವಾಂತಿಗೆ ಕಾರಣವಾಗಿದೆ. ಆದರೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಎಎಫ್ ಪಿ ವರದಿ ಮಾಡಿದೆ.

ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ 88 ವರ್ಷ ವಯಸ್ಸಿನ ಧರ್ಮಗುರು ಕಳೆದ ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಬ್ರಾಂಕೋಸ್ಪಾಸ್ಮ್ ಕಾರಣದಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ವ್ಯಾಟಿಕನ್ ಪ್ರಕಟಣೆ ಹೇಳಿವೆ.

ಈ ಹಿನ್ನಡೆಯ ಹೊರತಾಗಿಯೂ, ಫ್ರಾನ್ಸಿಸ್ ಅವರು ಜಾಗೃತರಾಗಿದ್ದು, ಚಿಕಿತ್ಸೆಗೆ ಸಹಕರಿಸುತ್ತಿದ್ದಾರೆ. ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುತ್ತದೆಯೇ ಎಂಬ ಬಗ್ಗೆ ಮುಂದಿನ 24 ರಿಂದ 48 ಗಂಟೆ ಅವಧಿ ವೈದ್ಯರು ತೀವ್ರ ನಿಗಾ ವಹಿಸಲಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಆರೋಗ್ಯದ ಸಮಸ್ಯೆ ನಡುವೆಯೂ ಆಸ್ಪತ್ರೆಯಿಂದಲೇ ಪೋಪ್ ಕಾರ್ಯನಿರ್ವಹಿಸುತ್ತಿದ್ದು, ಉಸಿರಾಟದ ವ್ಯಾಯಾಮ, ವಿಶ್ರಾಂತಿ ಮತ್ತು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News