ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗಂಭೀರ : ವ್ಯಾಟಿಕನ್
Update: 2025-02-23 13:06 IST

ಪೋಪ್ ಫ್ರಾನ್ಸಿಸ್ (Photo: PTI)
ವ್ಯಾಟಿಕನ್ ಸಿಟಿ : ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವ್ಯಾಟಿಕನ್ ದೃಢಪಡಿಸಿದೆ.
ಪೋಪ್ ಫ್ರಾನ್ಸಿಸ್ ಅವರು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿದೆ. ರಕ್ತ ಪರೀಕ್ಷೆಯನ್ನು ನಡೆಸಿದಾಗ ರಕ್ತಹೀನತೆ ಕಂಡು ಬಂದಿದ್ದು, ಅವರಿಗೆ ರಕ್ತ ವರ್ಗವಾಣೆಯನ್ನು ಮಾಡಲಾಗಿದೆ ಎಂದು ವ್ಯಾಟಿಕನ್ ಪ್ರಕಟಣೆಯಲ್ಲಿ ತಿಳಿಸಿದೆ.
ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅವರನ್ನು ಫೆಬ್ರವರಿ 14ರಿಂದ ರೋಮ್‌ನ ಅಗೋಸ್ಟಿನೋ ಗೆಮೆಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.