ಮಹಿಳಾ ಕೈದಿಗಳ ಪಾದ ತೊಳೆದ ಪೋಪ್ ಫ್ರಾನ್ಸಿಸ್
Update: 2024-03-29 22:52 IST

Photo: ndtv
ರೋಮ್: ಈಸ್ಟರ್ ಪೂರ್ವ ಆಚರಣೆಯ ಅಂಗವಾಗಿ ಪೋಪ್ ಫ್ರಾನ್ಸಿಸ್ ರೋಮ್‍ನ ಗುರುವಾರ ಈಶಾನ್ಯ ಹೊರವಲಯದ ರೆಬಿಬ್ಬಿಯಾ ಜೈಲಿಗೆ ಭೇಟಿ ನೀಡಿ 12 ಕೈದಿಗಳ ಪಾದ ತೊಳೆದರು ಎಂದು ವರದಿಯಾಗಿದೆ.
ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ಪೋಪ್ ಪ್ರತಿಯೊಬ್ಬ ಮಹಿಳಾ ಕೈದಿಯ ಪಾದವನ್ನು ತೊಳೆದು ಒಣಬಟ್ಟೆಯಲ್ಲಿ ಒರೆಸಿ ಗೌರವಿಸಿದರು. ಬಳಿಕ ಸುಮಾರು 370 ಮಹಿಳಾ ಕೈದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು `ಎಲ್ಲರೂ ತಪ್ಪು ಮಾಡಿದವರೇ, ಕೆಲವರು ಸಣ್ಣ ತಪ್ಪು ಮಾಡಿದ್ದರೆ ಇನ್ನು ಕೆಲವರು ದೊಡ್ಡ ತಪ್ಪು ಮಾಡಿದ್ದಾರೆ. ಆದರೆ ದೇವರು ನಮಗಾಗಿ ಕಾಯುತ್ತಿದ್ದಾರೆ. ಕ್ಷಮಿಸುವುದರಲ್ಲಿ ಅವರಿಗೆ ಎಂದಿಗೂ ದಣಿವಾಗುವುದಿಲ್ಲ' ಎಂದು ಸಂದೇಶ ನೀಡಿದರು.