ಮಣಿಪುರ ಹಿಂಸಾಚಾರ ಕೊನೆಗೊಳಿಸಲು, ಅಲ್ಪಸಂಖ್ಯಾತರ ರಕ್ಷಣೆಗೆ ತ್ವರಿತ ಕ್ರಮ

Update: 2023-07-13 18:18 GMT

Photo : PTI 

ಸ್ಷ್ರಾಸ್ ಬರ್ಗ್: ಮಣಿಪುರ ಹಿಂಸಾಚಾರ ಕೊನೆಗೊಳಿಸಲು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಯುರೋಪಿಯನ್ ಸಂಸತ್ ಭಾರತ ಸರಕಾರವನ್ನು ಆಗ್ರಹಿಸಿದೆ.

ಈ ವಿಷಯದ ಬಗ್ಗೆ ಬುಧವಾರ ಸಂಜೆ ಚರ್ಚೆ ನಡೆಸಿದ ಬಳಿಕ ನಿರ್ಣಯವನ್ನು ಮಂಡಿಸಲಾಗಿದ್ದು ಸಂಸದರು ಕೈ ಎತ್ತುವ ಮೂಲಕ ಅನುಮೋದಿಸಿದರು. ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ಮತ್ತು ಹಿಂಸಾಚಾರ ಉಲ್ಬಣಿಸದಂತೆ ಪೂರ್ವಭಾವಿ ಕ್ರಮ ಕೈಗೊಳ್ಳುವಂತೆ ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

ಮಣಿಪುರದಲ್ಲಿ ಗಲಭೆಗ್ರಸ್ತ ಪ್ರದೇಶಗಳಿಗೆ ಪತ್ರಕರ್ತರಿಗೆ ಮತ್ತು ಅಂತರ್ರಾಷ್ಟ್ರೀಯ ವೀಕ್ಷಕರಿಗೆ ಅಡೆತಡೆಯಿಲ್ಲದ ಪ್ರವೇಶಾವಕಾಶ ಒದಗಿಸಲು ಮತ್ತು ಇಂಟರ್ನೆಟ್ ಸ್ಥಗಿತ

ಅಂತ್ಯಗೊಳಿಸಲು ಆಗ್ರಹಿಸಲಾಗಿದೆ. ಅಲ್ಲದೆ ವಿಶ್ವಸಂಸ್ಥೆಯ ಸಾರ್ವತ್ರಿಕ ಆವರ್ತಕ ವಿಮರ್ಶೆಯ ಶಿಫಾರಸಿಗೆ ಅನುಗುಣವಾಗಿ , ಕಾನೂನುಬಾಹಿರ ‘ಶಸ್ತ್ರಾಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ’ಯನ್ನು ರದ್ದುಗೊಳಿಸಲು ಭಾರತ ಸರಕಾರವನ್ನು ಆಗ್ರಹಿಸಿದೆ. ಅಲ್ಲದೆ ಭಾರತದೊಂದಿಗಿನ ಸಂವಾದ ಮತ್ತು ಸಂಬಂಧದಲ್ಲಿ ಮಾನವ ಹಕ್ಕುಗಳ ವಿಷಯಕ್ಕೆ ಆದ್ಯತೆ ನೀಡಬೇಕೆಂದು ಯುರೋಪಿಯನ್ ಸಂಸತ್ನ ಸದಸ್ಯರು ಯುರೋಪಿಯನ್ ಯೂನಿಯನ್ ಅನ್ನು ಆಗ್ರಹಿಸಿದ್ದಾರೆ. ಚರ್ಚೆಯ ಸಂದರ್ಭ ಸಂಸತ್ ಸದಸ್ಯರು ಮಣಿಪುರ ಮಾತ್ರವಲ್ಲ, ಭಾರತದಾದ್ಯಂತ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News