ರಫಾ | ಇಸ್ರೇಲ್ ವಾಯುದಾಳಿಯಲ್ಲಿ 12 ಫೆಲೆಸ್ತೀನೀಯರ ಮೃತ್ಯು

Update: 2024-05-30 17:09 GMT

PC: x.com/KenRoth

ಗಾಝಾ: ದಕ್ಷಿಣ ಗಾಝಾದ ರಫಾ ನಗರದ ಮೇಲೆ ಗುರುವಾರ ಬೆಳಿಗ್ಗೆ ಇಸ್ರೇಲ್ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 12 ಫೆಲೆಸ್ತೀನೀಯರು ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ಗಾಝಾದ ವೈದ್ಯಕೀಯ ಇಲಾಖೆ ಹೇಳಿದೆ.

ಗಾಝಾ ಪಟ್ಟಿ ಮತ್ತು ಈಜಿಪ್ಟ್ ನಡುವಿನ ಗಡಿಯ ಸನಿಹದ ಬಫರ್ ವಲಯ(ತಟಸ್ಥ ವಲಯ) ತನ್ನ ಪಡೆಗಳ ನಿಯಂತ್ರಣಕ್ಕೆ ಬಂದಿರುವುದರಿಂದ ಗಾಝಾದ ಸಂಪೂರ್ಣ ಭೂ ಗಡಿಯ ಮೇಲೆ ಪರಿಣಾಮಕಾರಿ ಅಧಿಕಾರವನ್ನು ಪಡೆದಿದೆ. ತಟಸ್ಥ ವಲಯದ ಮಾರ್ಗದ ಮೂಲಕ ಹಮಾಸ್ ಕಳೆದ 7 ತಿಂಗಳಲ್ಲಿ ಗಾಝಾಕ್ಕೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿತ್ತು. ಇದೀಗ ಈ ಮಾರ್ಗವನ್ನು ತಡೆಹಿಡಿಯಲಾಗಿದೆ ಎಂದು ಇಸ್ರೇಲ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News