'ಸುಡಾನ್‍ನ ಐದು ಪ್ರದೇಶಗಳಿಗೆ ಬರಗಾಲ ಆವರಿಸಿದೆ' :ವಿಶ್ವಸಂಸ್ಥೆ ವರದಿಯನ್ನು ತಿರಸ್ಕರಿಸಿದ ಸುಡಾನ್ ಸರಕಾರ
Update: 2024-12-29 17:14 GMT
ಖಾರ್ಟೌಮ್: ಯುದ್ಧದಿಂದ ಜರ್ಝರಿತಗೊಂಡಿರುವ ಸುಡಾನ್‍ನ ಐದು ಪ್ರದೇಶಗಳಿಗೆ ಬರಗಾಲ ಆವರಿಸಿದೆ ಎಂಬ ವಿಶ್ವಸಂಸ್ಥೆ ಬೆಂಬಲಿತ ವರದಿಯನ್ನು ತಿರಸ್ಕರಿಸುವುದಾಗಿ ಸುಡಾನ್ ಸರಕಾರ ರವಿವಾರ ಹೇಳಿದೆ.
ಸುಡಾನ್‍ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಯ ನಡುವೆ ಮುಂದುವರಿದಿರುವ ಯುದ್ಧದಿಂದಾಗಿ 6,38,000 ಜನರಿಗೆ ಬರಗಾಲದ ರೀತಿಯ ಪರಿಸ್ಥಿತಿ ಎದುರಾಗಿದೆ ಮತ್ತು 8.1 ದಶಲಕ್ಷ ಜನತೆಗೆ ಆಹಾರದ ತೀವ್ರ ಕೊರತೆ ಸಮಸ್ಯೆ ಕಾಡಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಬೆಂಬಲಿತ `ದಿ ಇಂಟಿಗ್ರೇಟೆಡ್ ಫುಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಷನ್' ವರದಿ ಮಾಡಿತ್ತು.
ವರದಿಯನ್ನು ಸಂಪೂರ್ಣ ತಿರಸ್ಕರಿಸುವುದಾಗಿ ಸುಡಾನ್‍ನ ವಿದೇಶಾಂಗ ಇಲಾಖೆ ಹೇಳಿದೆ.