ಗಾಝಾಕ್ಕೆ ಇಂಟರ್ನೆಟ್ ಸಂಪರ್ಕ ಮರುಸ್ಥಾಪನೆ

Update: 2023-10-29 18:32 GMT

Photo: PTI

ಜೆರುಸಲೇಂ: ಸುಮಾರು 2 ದಿನಗಳ ಬಳಿಕ ಗಾಝಾ ಪಟ್ಟಿಗೆ ಇಂಟರ್ನೆಟ್ ಸಂಪರ್ಕವನ್ನು ಮರುಸ್ಥಾಪಿಸಲಾಗಿದೆ ಎಂದು ಜಾಗತಿಕ ನೆಟ್ವರ್ಕ್ ನಿಗಾ ಸಂಸ್ಥೆ ‘ನೆಟ್ಬ್ಲಾಕ್ಸ್’ ರವಿವಾರ ಹೇಳಿದೆ.

ಗಾಝಾ ಪಟ್ಟಿಗೆ ಇಂಟರ್ನೆಟ್ ಸಂಪರ್ಕ ಮರುಸ್ಥಾಪನೆಗೊಂಡಿರುವುದನ್ನು ರಿಯಲ್ಟೈಮ್ ನೆಟ್ವರ್ಕ್ ಡೇಟಾ ದೃಢಪಡಿಸಿದೆ ಎಂದು ನೆಟ್ಬ್ಲಾಕ್ಸ್ನ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ. ಗಾಝಾ ಪಟ್ಟಿಯ ಮೇಲೆ ಇಸ್ರೇಲಿನ ನಿರಂತರ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಗಾಝಾ ಪಟ್ಟಿಯಲ್ಲಿ ಇಂಟರ್ನೆಟ್, ಮೊಬೈಲ್ ಮತ್ತು ಸ್ಥಿರ ದೂರವಾಣಿ ಸಂಪರ್ಕ ಕಡಿತಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News