ರಶ್ಯ : ಕಳ್ಳತನದ ಆರೋಪದಲ್ಲಿ ಅಮೆರಿಕದ ಯೋಧನ ಬಂಧನ

Update: 2024-05-07 17:10 GMT

ಸಾಂದರ್ಭಿಕ ಚಿತ್ರ

ಮಾಸ್ಕೋ: ಕಳ್ಳತನದ ಆರೋಪದಲ್ಲಿ ಅಮೆರಿಕದ ಯೋಧನೊಬ್ಬನನ್ನು ರಶ್ಯದ ಬಂದರು ನಗರ ವ್ಲಾದಿವೊಸ್ಟೊಕ್‍ನಲ್ಲಿ ಬಂಧಿಸಲಾಗಿದೆ ಎಂದು ರಶ್ಯದ ಮೂಲಗಳು ತಿಳಿಸಿದ್ದು ಅಮೆರಿಕದ ಅಧಿಕಾರಿಗಳು ಈ ವರದಿಯನ್ನು ದೃಢಪಡಿಸಿದ್ದಾರೆ.

ಉತ್ತರ ಕೊರಿಯಾ ಮತ್ತು ಚೀನಾದ ಗಡಿಸನಿಹದ ವ್ಲಾದಿವೊಸ್ಟೊಕ್ ನಗರದಲ್ಲಿ ಮೇ 2ರಂದು ಸ್ಟಾಫ್ ಸರ್ಜಂಟ್ ಗಾರ್ಡನ್ ಡಿ. ಬ್ಲ್ಯಾಕ್‍ನನ್ನು ರಶ್ಯದ ಅಧಿಕಾರಿಗಳು ಬಂಧಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಅಮೆರಿಕದ ಸೇನಾನೆಲೆಯಲ್ಲಿ ಕರ್ತವ್ಯದಲ್ಲಿದ್ದ ಗಾರ್ಡನ್ ಬ್ಲ್ಯಾಕ್ ವೈಯಕ್ತಿಕ ಕಾರಣಕ್ಕೆ ರಶ್ಯಕ್ಕೆ ಭೇಟಿ ನೀಡಿದ್ದು ಉನ್ನತ ಅಧಿಕಾರಿಗಳ ಅನುಮತಿ ಪಡೆದಿರಲಿಲ್ಲ ಎಂದು ವರದಿಯಾಗಿದೆ. `ರಶ್ಯದಲ್ಲಿರುವ ತನ್ನ ಗೆಳತಿಯನ್ನು ಭೇಟಿಯಾಗಲು ಬ್ಲ್ಯಾಕ್ ತೆರಳಿದ್ದ. ಆತ ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ ಆತನಿಗೆ ವಿಚಾರಣೆಯ ನೆಪದಲ್ಲಿ ಚಿತ್ರಹಿಂಸೆ ನೀಡಬಾರದು ಎಂದು' ಯೋಧನ ತಾಯಿ ಮೆಲೋಡಿ ಜೋನ್ಸ್ ರಶ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕ್ರಿಮಿನಲ್ ದುಷ್ಕøತ್ಯದ ಆರೋಪದಲ್ಲಿ ಅಮೆರಿಕದ ಯೋಧನನ್ನು ಬಂಧಿಸಿರುವ ಬಗ್ಗೆ ರಶ್ಯ ಅಧಿಕಾರಿಗಳು ಶಿಷ್ಟಾಚಾರದಂತೆ ಅಮೆರಿಕದ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಂಧನದಲ್ಲಿರುವ ಯೋಧನಿಗೆ ಸೂಕ್ತ ಕಾನ್ಸುಲರ್ ನೆರವು ಒದಗಿಸಲಾಗಿದೆ ಎಂದು ಅಮೆರಿಕದ ಸೇನಾಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News