ಮತಪತ್ರದಲ್ಲಿ `ಯುದ್ಧಬೇಡ' ಎಂದು ಬರೆದಿದ್ದ ರಶ್ಯನ್ ಮಹಿಳೆಗೆ ಜೈಲುಶಿಕ್ಷೆ

Update: 2024-03-21 16:48 GMT

ಸಾಂದರ್ಭಿಕ ಚಿತ್ರ

ಮಾಸ್ಕೋ, ಮಾ.21: ಇತ್ತೀಚೆಗೆ ನಡೆದಿದ್ದ ರಶ್ಯ ಅಧ್ಯಕ್ಷೀಯ ಚುನಾವಣೆಯ ಮತಪತ್ರದಲ್ಲಿ `ಯುದ್ಧಬೇಡ' ಎಂಬ ಸಂದೇಶ ಬರೆದಿದ್ದ ಮಹಿಳೆಗೆ 8 ದಿನಗಳ ಜೈಲುಶಿಕ್ಷೆ ವಿಧಿಸಲಾಗಿದೆ.

ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿರಾಯಾಸವಾಗಿ ಗೆದ್ದು ಮತ್ತೆ 6 ವರ್ಷದ ಅವಧಿಗೆ ಅಧಿಕಾರ ಪಡೆದಿದ್ದಾರೆ. ಚುನಾವಣೆಯಲ್ಲಿ ಮತದಾನ ಮಾಡಲು ಬಂದ ಸೈಂಟ್ ಪೀಟರ್ಸ್ಬರ್ಗ್ನ ಅಲೆಕ್ಸಾಂಡ್ರಾ ಚಿರ್ಯಟ್ಯೆವಾ ಮತಪತ್ರದ ಹಿಂಬದಿಯಲ್ಲಿ ಕೆಂಪು ಮಾರ್ಕರ್ ಪೆನ್ನಿಂದ `ಯುದ್ಧಬೇಡ' ಎಂದು ಬರೆದು ಅದನ್ನು ಮತಪೆಟ್ಟಿಗೆಯೊಳಗೆ ಹಾಕಿದ್ದಳು. ಗೂಂಡಾಗಿರಿ ಮತ್ತು ರಶ್ಯದ ಸಶಸ್ತ್ರ ಪಡೆಗಳನ್ನು ಅಪಖ್ಯಾತಿಗೊಳಿಸಿದ ಅಪರಾಧಕ್ಕೆ ಆಕೆಗೆ 40,000 ರೂಬಲ್ಸ್(436 ಡಾಲರ್ಗಳು) ದಂಡ ಮತ್ತು 8 ದಿನಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಈ ಕೃತ್ಯದ ಮೂಲಕ ಸರಕಾರದ ಆಸ್ತಿಗೆ ಹಾನಿ ಎಸಗಲಾಗಿದೆ ಎಂದು ಸೈಂಟ್ ಪೀಟರ್ಸ್ಬರ್ಗ್ನ ಜಿಲ್ಲಾ ನ್ಯಾಯಾಲಯದ ಆದೇಶ ಹೇಳಿದೆ.

5ನೇ ಅವಧಿಗೆ ಪುಟಿನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಚುನಾವಣೆ ಸೋವಿಯತ್ ಯುಗದ ಬಳಿಕದ ಅತ್ಯಂತ ಭ್ರಷ್ಟ ಚುನಾವಣೆಯಾಗಿದೆ ಎಂದು ಪಾಶ್ಚಿಮಾತ್ಯರು ಮತ್ತು ರಶ್ಯನ್ ಚುನಾವಣಾ ವೀಕ್ಷಕರು ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News