ಇಸ್ರೇಲ್ ಸಚಿವರ ಹೇಳಿಕೆ ಖಂಡಿಸಿದ ಸೌದಿ ಅರೇಬಿಯಾ
ಜೆರುಸಲೇಂ: ಗಾಝಾ ಪಟ್ಟಿಯ ಮೇಲೆ ಪರಮಾಣು ಬಾಂಬ್ ಹಾಕುವ ಕುರಿತು ಇಸ್ರೇಲ್ ಸರ್ಕಾರದ ಸಚಿವರೊಬ್ಬರ ಹೇಳಿಕೆಯನ್ನು ಸೌದಿ ಅರೇಬಿಯಾ ರವಿವಾರ ತೀವ್ರವಾಗಿ ಖಂಡಿಸಿದೆ ಎಂದು arabnews.com ವರದಿ ಮಾಡಿದೆ.
ಇಂತಹ ಬೇಜಾವ್ದಾರಿ ಹೇಳಿಕೆಗಳು "ಇಸ್ರೇಲಿ ಸರ್ಕಾರದ ಸಚಿವರಲ್ಲಿ ರುವ ತೀವ್ರವಾದ ಮತ್ತು ಕ್ರೂರತೆಯ ಮನಸ್ಥಿತಿ ತೋರಿಸುತ್ತವೆ" ಎಂದು ಸೌದಿ ವಿದೇಶಾಂಗ ಸಚಿವಾಲಯ ಹೇಳಿದೆ.
"ಸಚಿವರನ್ನು ವಜಾಗೊಳಿಸದೇ ಅವರ ಸದಸ್ಯತ್ವವನ್ನು ಮಾತ್ರ ತಡೆಹಿಸಿದಿರುವುದು ಮಾನವೀಯ ಮೌಲ್ಯಗಳ ಬಗ್ಗೆ ಇರುವ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ರವಿವಾರ ಸಂಸ್ಕೃತಿ ಸಚಿವ ಎಲಿಯಾಹು ಅವರನ್ನು "ಮುಂದಿನ ಸೂಚನೆ ಬರುವವರೆಗೆ" ಸರ್ಕಾರಿ ಸಭೆಗಳಿಂದ ಅಮಾನತುಗೊಳಿಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.
ಎಲಿಯಾಹು ಸಂದರ್ಶನವೊಂದರಲ್ಲಿ ಗಾಝಾದ ಮೇಲೆ ಪರಮಾಣು ಬಾಂಬ್ ಹಾಕುವ ಆಯ್ಕೆಯೂ ಇದೆ ಎಂದು ಹೇಳಿದ ನಂತರ, ಅವರ ಹೇಳಿಕೆ ವಿವಾದಕ್ಕೀಡಾಗಿತ್ತು.