ಅಮೆರಿಕ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗುಂಡಿನ ದಾಳಿ; 3 ಮಂದಿ ಮೃತ್ಯು
Update: 2023-07-05 16:42 GMT
ವಾಷಿಂಗ್ಟನ್: ಉತ್ತರ ಲೂಸಿಯಾನಾದ ಶ್ರೆವೆಪೋರ್ಟ್ನಲ್ಲಿ ನಡೆಯುತ್ತಿದ್ದ ಅಮೆರಿಕ ಸ್ವಾತಂತ್ರ್ಯದಿನದ ಸಂಭ್ರಮಾಚರಣೆಯ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಮೂರು ಮಂದಿ ಮೃತಪಟ್ಟಿದ್ದು ಕನಿಷ್ಟ 6 ಮಂದಿ ಗಾಯಗೊಂಡಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
ಪ್ರತೀ ವರ್ಷ ಜುಲೈ 4ರಂದು ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತದೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನ ಗುಂಪುಸೇರಿದ್ದು ಆಗ ಏಕಾಏಕಿ ಗುಂಡಿನ ದಾಳಿ ಆರಂಭವಾಗಿದೆ. ಸಭಾಂಗಣದ ಹೊರಗೆ ವಾಹನಗಳನ್ನು ಪಾರ್ಕ್ ಮಾಡಿದ್ದರಿಂದ ಜನರು ಹೊರಗೆ ಓಡಿ ಬರಲು ಕಷ್ಟವಾಗಿ ನೂಕುನುಗ್ಗಲು ಉಂಟಾಗಿದೆ. ಈ ಗೊಂದಲದಲ್ಲಿ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಆಗಲಿಲ್ಲ.
ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದಾಗ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ ಕನಿಷ್ಟ 7 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಶ್ರೆವೆಪೋರ್ಟ್ನ ಪೊಲೀಸ್ ಅಧಿಕಾರಿ ವ್ಯಾನ್ವ್ರೆ ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.