ಕಮಲಾ ಹ್ಯಾರಿಸ್ ರ ಚುನಾವಣಾ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ

Update: 2024-09-25 13:28 IST
ಕಮಲಾ ಹ್ಯಾರಿಸ್ ರ ಚುನಾವಣಾ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ

ಕಮಲಾ ಹ್ಯಾರಿಸ್ (Photo: PTI)

  • whatsapp icon

ಅರಿಝೋನಾ (ಅಮೆರಿಕ): ಅರಿಝೋನಾದಲ್ಲಿನ ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರ ಕಚೇರಿಯ ಮೇಲೆ ಸೋಮವಾರ ಗುಂಡಿನ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಕಚೇರಿಗೆ ಹಾನಿಯಾಗಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು AP ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅರಿಝೋನಾ ರಾಜ್ಯಕ್ಕೆ ಇನ್ನು ಕೆಲವೇ ದಿನಗಳಲ್ಲಿ ಕಮಲಾ ಹ್ಯಾರಿಸ್ ಭೇಟಿ ನೀಡುವವರಿದ್ದರು. ಅದಕ್ಕೂ ಮುನ್ನವೇ ಈ ದಾಳಿ ನಡೆದಿದ್ದು, ಈ ಘಟನೆಯ ತನಿಖೆಯನ್ನು ಟೆಂಪೆ ಪೊಲೀಸರು ನಡೆಸುತ್ತಿದ್ದಾರೆ.

ಗುಂಡಿನ ದಾಳಿ ಸಂದರ್ಭದಲ್ಲಿ ಡೆಮಾಕ್ರಟಿಕ್ ಪಕ್ಷದ ಕಚೇರಿಯಲ್ಲಿ ಯಾವುದೇ ಜೀವಹಾನಿ ಸಂಭವಿಸದೆ ಇರುವುದರಿಂದ ಪೊಲೀಸರು ಆಸ್ತಿಪಾಸ್ತಿ ನಷ್ಟ ಪ್ರಕರಣವನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ.

Arizona Republic ಸುದ್ದಿ ಸಂಸ್ಥೆಯ ಪ್ರಕಾರ, ಸೆಪ್ಟೆಂಬರ್ 16ರಂದೂ ಕೂಡಾ ಈ ಕಚೇರಿಯ ಮೇಲೆ ಪೆಲೆಟ್ ಅಥವಾ ಬಿಬಿ ಗನ್ ಮೂಲಕ ಹಲವು ಸುತ್ತಿನ ಗುಂಡಿನ ದಾಳಿ ನಡೆದಿತ್ತು ಎಂದು ಹೇಳಲಾಗಿದೆ.

ಗುಂಡಿನ ದಾಳಿಯಲ್ಲಿ ಡೆಮಾಕ್ರಟಿಕ್ ಪಕ್ಷದ ಬಾಗಿಲಿಗೆ ಎರಡು ಗುಂಡು ತಗುಲಿರುವುದು ಹಾಗೂ ಇನ್ನೆರಡು ಗುಂಡುಗಳು ಕಿಟಕಿಗಳಿಗೆ ತಗುಲಿರುವ ವಿಡಿಯೊವನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News