ದಕ್ಷಿಣ ಕೊರಿಯಾ ಅಧ್ಯಕ್ಷರ ಮೇಲೆ ಪ್ರಯಾಣ ನಿಷೇಧ ಆದೇಶ

Update: 2024-12-09 21:51 IST
Photo of  Yoon Suk Yeol

ಯೂನ್ ಸುಕ್ ಯಿಯೋಲ್ PC : PTI/AP

  • whatsapp icon

ಸಿಯೋಲ್ : ಕಳೆದ ವಾರ ದೇಶದಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸಿದ ಘಟನೆಯ ಬಗ್ಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ವಿರುದ್ಧ ತನಿಖೆ ನಡೆಸುತ್ತಿರುವಂತೆಯೇ ಸೋಮವಾರ ಭ್ರಷ್ಟಾಚಾರ ತನಿಖಾ ದಳ ಅಧ್ಯಕ್ಷರ ಮೇಲೆ ಪ್ರಯಾಣ ನಿಷೇಧ ಆದೇಶ ಹೊರಡಿಸಿದೆ.

ಮಿಲಿಟರಿ ಕಾನೂನು ಜಾರಿ ಆದೇಶವನ್ನು ಕೆಲವೇ ಗಂಟೆಗಳಲ್ಲಿ ಅಧ್ಯಕ್ಷರು ರದ್ದುಗೊಳಿಸಿದ್ದರೂ ಅವರ ವಿರುದ್ಧ ದಾಖಲಾಗಿರುವ ದಂಗೆಯ ಆರೋಪಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ, ಸಂಸತ್‍ನಲ್ಲಿ ಅಧ್ಯಕ್ಷರನ್ನು ದೋಷಾರೋಪಣೆಗೆ ಗುರಿಪಡಿಸುವ ವಿರೋಧ ಪಕ್ಷಗಳ ನಿರ್ಣಯ ವಿಫಲವಾಗಿದ್ದು ಈ ವಾರ ಮತ್ತೊಂದು ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News