ನಿಜ್ಜರ್ ಹತ್ಯೆ ಕುರಿತ ಹೇಳಿಕೆಯು ಭಾರತವನ್ನು ಇಂತಹ ಕೃತ್ಯಗಳಿಂದ ತಡೆಯುವ ಉದ್ದೇಶ ಹೊಂದಿದೆ: ಕೆನಡಾ

Update: 2023-12-13 18:11 GMT

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (PTI)

ಒಟ್ಟಾವ: ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಏಜೆಂಟರ ಪಾತ್ರವಿದೆ ಎಂದು ಸೆಪ್ಟಂಬರ್ 18ರಂದು ಕೆನಡಾ ಸಂಸತ್‍ನಲ್ಲಿ ತಾನು ನೀಡಿದ್ದ `ವಿಶ್ವಾಸಾರ್ಹ ಆರೋಪಗಳ' ಕುರಿತ ಹೇಳಿಕೆಯು ದೇಶದಲ್ಲಿ ಇಂತಹ ಕ್ರಮಗಳನ್ನು ಮುಂದುವರಿಸದಂತೆ ಭಾರತವನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ.

ನಾವು ನಡೆಸುತ್ತಿರುವ ನಿಶ್ಯಬ್ದ ರಾಜತಾಂತ್ರಿಕ ಉಪಕ್ರಮಗಳು ಮತ್ತು ಕ್ರಮಗಳು ನಮ್ಮ ಜನರನ್ನು ಸುರಕ್ಷಿತವಾಗಿಸುವ ಉದ್ದೇಶವನ್ನು ಹೊಂದಿದೆ. ನಮಗೆ ತಿಳಿದಿದೆ ಎಂದು ಸಾರ್ವಜನಿಕವಾಗಿ, ದೊಡ್ಡ ಧ್ವನಿಯಲ್ಲಿ ಹೇಳುವುದು ಅಥವಾ ಇದರ ಹಿಂದೆ ಭಾರತ ಸರಕಾರವಿದೆ ಎಂದು ಹೇಳಲು ನಮಗೆ ವಿಶ್ವಾಸಾರ್ಹ ಕಾರಣಗಳಿವೆ. ಆದರೆ ಭಾರತ ಮಾಹಿತಿ ಯುದ್ಧವನ್ನು ಆರಂಭಿಸಿದೆ. ನಮ್ಮ ಮೇಲೆ ದಾಳಿ ಮಾಡಲು, ಅಪಪ್ರಚಾರ ಮಾಡಲು ತನ್ನ ಹಾಸ್ಯಾಸ್ಪದ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದೆ' ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News