ಕೆನಡಾದಲ್ಲಿ ಮೋದಿ ಸರಕಾರದ ಬೆಂಬಲಿಗರು ಹಿಂದು ಸಮುದಾಯವನ್ನು ಪ್ರತಿನಿಧಿಸುವುದಿಲ್ಲ : ಜಸ್ಟಿನ್ ಟ್ರೂಡೊ

Update: 2024-11-08 16:18 GMT

ಜಸ್ಟಿನ್ ಟ್ರೂಡೊ | PC : PTI 

ಒಟ್ಟಾವ : ಕೆನಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಅನೇಕ ಬೆಂಬಲಿಗರಿದ್ದಾರೆ. ಆದರೆ ಅವರು ಒಟ್ಟಾರೆಯಾಗಿ ಎಲ್ಲಾ ಹಿಂದು ಕೆನಡಿಯನ್ನರನ್ನು ಪ್ರತಿನಿಧಿಸುವುದಿಲ್ಲ. ಅದೇ ರೀತಿ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಮೊದಲ ಬಾರಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿಕೆ ನೀಡಿದ್ದಾರೆ.

ಒಟ್ಟಾವದ ಪಾರ್ಲಿಮೆಂಟ್ ಹಿಲ್ಸ್‍ನಲ್ಲಿ ನಡೆದ ದೀಪಾವಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಟ್ರೂಡೊ ` ಕೆನಡಾದಲ್ಲಿ ಹಲವಾರು ಖಾಲಿಸ್ತಾನ್ ಬೆಂಬಲಿಗರಿದ್ದಾರೆ. ಆದರೆ ಅವರು ಪೂರ್ಣವಾಗಿ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ' ಎಂದು ಹೇಳಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ `ದಿ ಹಿಂದುಸ್ತಾನ್ ಟೈಮ್ಸ್' ವರದಿ ಮಾಡಿದೆ. ಕೆನಡಾ ಸರಕಾರದ ಸಚಿವರಾದ ಅನಿತಾ ಆನಂದ್ ಮತ್ತು ಗ್ಯಾರಿ ಆನಂದಸಂಗರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಹಿಂಸೆಗೆ, ಅಸಹಿಷ್ಣುತೆಗೆ, ಬೆದರಿಕೆ ಅಥವಾ ವಿಭಜನೆಗೆ ಅವಕಾಶವಿಲ್ಲ. ಜನರು ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಆಚರಿಸಲು ನಾವು ಪ್ರೋತ್ಸಾಹಿಸುತ್ತೇವೆ. ತಮ್ಮ ಸರಕಾರ ಒಂದು ಭಾರತದ ಮತ್ತು ಭಾರತದ ಪ್ರಾದೇಶಿಕ ಸಮಗ್ರತೆಯ ಪರವಿದೆ ಎಂದರು.    

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News